ಕೊಲೆ ಪ್ರಕರಣದ ಆರೋಪಿ ಮಾದಕದ್ರವ್ಯದೊಂದಿಗೆ ಸೆರೆ
ಕುಂಬಳೆ: ಕೊಲೆ ಪ್ರಕರಣದ ಆರೋಪಿಯಾದ ಪುತ್ತಿಗೆ ನಿವಾಸಿ ಮಾದಕ ದ್ರವ್ಯ ಸಹಿತ ಸೆರೆಗೀಡಾಗಿದ್ದಾನೆ. ಪುತ್ತಿಗೆ ಕಟ್ಟತ್ತಡ್ಕ ರಾಹಿಲಾ ಮಂಜಿಲ್ನ ಮುಹಮ್ಮದ್ ಹುಸೈನ್ (೨೬) ಎಂಬಾತನನ್ನು ಕಳಮಶ್ಶೇರಿ ಪೊಲೀಸರು ಬಂಧಿಸಿದ್ದಾರೆ. ಈತನ ಕೈಯಿಂದ ೯.೩೩ ಗ್ರಾಂ ಮಾದಕ ವಸ್ತು ವಶಪಡಿಸಲಾಗಿದೆ. ವಲ್ಲಾರ್ಪಾಡಂ ಕಂಟೈನರ್ ರಸ್ತೆಯಲ್ಲಿ ಹುಸೈನ್ ಸೆರೆಗೀಡಾಗಿದ್ದಾನೆ. ಈ ಪ್ರದೇಶದಲ್ಲಿ ಮಾದಕ ವಸ್ತು ಮಾರಾಟ ನಡೆಯುತ್ತಿದೆ ಎಂಬ ಗುಪ್ತ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸ್ ತಂಡ ಅಲ್ಲಿಗೆ ತಲುಪಿ ಕಾರ್ಯಾಚರಣೆ ನಡೆಸಿತ್ತು. ಕಳೆದ ವರ್ಷ ಪಾಲಾರಿವಟ್ಟಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಮುಹಮ್ಮದ್ ಹುಸೈನ್ ನಾಲ್ಕನೇ ಆರೋಪಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.