ಕೊಲ್ಲಂನ ದಂಪತಿ, ಪುತ್ರಿ ಮಡಿಕೇರಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಕರ್ನಾಟಕದ ಮಡಿಕೇರಿಯ ರೆಸಾರ್ಟ್ನಲ್ಲಿ ಕೊಲ್ಲಂ ನಿವಾಸಿ ದಂಪತಿ ಹಾಗೂ ಪುತ್ರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪರವೂರ್ ಕುನಯಿಲ್ ಚಾಮವಿಳ ನಿವಾಸಿ ಬಾಬು ಸೇನನ್- ಕಸ್ತೂರಿ ಬಾ ದಂಪತಿಯ ಪುತ್ರ ವಿನೋದ್ ಬಾಬು ಸೇನನ್ (೪೩), ಪತ್ನಿ ಜಿಬಿ ಎಬ್ರಹಾಂ (೩೮), ಪುತ್ರಿ ಜೈನ್ ಮರಿಯ ಜೇಕಬ್ (೧೧) ಎಂಬಿವರು ಮೃತಪಟ್ಟವರಾಗಿದ್ದಾರೆ. ಪುತ್ರಿಯನ್ನು ಕೊಲೆಗೈದ ಬಳಿಕ ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಸಯಿಸಲಾಗಿದೆ. ಜಿಬಿ ವಿನೋದ್ನ ದ್ವಿತೀಯ ಪತ್ನಿಯಾಗಿದ್ದಾಳೆ. ಜಿಬಿಯ ಮೊದಲ ಪತಿಗೆ ಜನಿಸಿದವಳಾಗಿದ್ದಾಳೆ ಜೈನ್ ಮರಿಯ ಎಂದು ಹೇಳಲಾಗುತ್ತಿದೆ. ಶುಕ್ರವಾರ ಸಂಜೆ ಈ ಮೂವರು ರೆಸಾರ್ಟ್ಗೆ ತಲುಪಿದ್ದಾರೆ. ಶನಿವಾರ ಅವರು ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಇದರಿಂದ ಸಂಶಯಗೊಂಡ ನೌಕರರು ನೋಡಿದಾಗ ಈ ಮೂವರು ಮೃತಪಟ್ಟಿರುವುದು ಕಂಡು ಬಂದಿದೆ. ಆರ್ಥಿಕ ಸಂದಿಗ್ಧತೆಯೇ ಆತ್ಮಹತ್ಯೆಗೆ ಕಾರಣವೆಂದು ಅಂದಾಜಿಸಲಾಗಿದೆ.