ಕೊಲ್ಲಬಂಜಾರ ಸ್ಮಶಾನಕ್ಕೆ ಶೆಡ್ ನಿರ್ಮಾಣ ಕಾಮಗಾರಿ ಆರಂಭ: ಊರವರ ಬೇಡಿಕೆಗೆ ಸ್ಪಂದನೆ
ಉಪ್ಪಳ: ಪೈವಳಿಕೆ ಪಂಚಾ ಯತ್ನ ೧೪ನೇ ವಾರ್ಡ್ನ ಕಯ್ಯಾರ್ ಬಳಿಯ ಕೊಲ್ಲಬಂಜಾರ ಸಾರ್ವ ಜನಿಕ ಸ್ಮಶಾನದಲ್ಲಿ ಶೆಡ್ಡ್ ನಿರ್ಮಾ ಣದ ಕಾಮಗಾರಿ ಆರಂಭಗೊA ಡಿದೆ. ಸ್ಮಶಾನಕ್ಕೆ ಆವರಣಗೋಡೆ ಮಾತ್ರವೆ ಈ ಹಿಂದೆ ನಿರ್ಮಿಸ ಲಾಗಿದೆ. ಇದರ ಅಭಿವೃದ್ದಿಗಾಗಿ ಊರವರು ಹಲವು ವರ್ಷಗಳಿಂದ ಒತ್ತಾಯಿಸುತ್ತಿದ್ದರು. ವಾರ್ಡ್ ಪ್ರತಿನಿದಿs ರಾಜೀವಿ ಶೆಟ್ಟಿಗಾರ್ ರವರ ಮುತುವರ್ಜಿಯಿಂದ ಪಂಚಾ ಯತ್ನಿಂದ ಪsಂಡ್ ಮಂಜೂರು ಗೊಂಡು ಇದೀಗ ಅದರ ಕಾಮಗಾರಿ ಆರಂಭಿಸಲಾಗಿದೆ. ಪಿಲ್ಲರ್ ಹಾಕುವ ಕೆಲಸ ನಡೆಯುತ್ತಿದೆ. ಕುಡಾಲು ಮೇರ್ಕಳ, ಕಯ್ಯಾರ್ ಗ್ರಾಮ ಸಹಿತ ವಿವಿಧ ಪ್ರದೇಶದವರು ಈ ಸ್ಮಶಾನವನ್ನು ಉಪಂÄೆÆÃಗಿಸುತ್ತಾರೆ. ಕಳಪೆ ಕಾಮಗಾರಿ ನಡೆಸದೆ ಶೀಘ್ರವಾಗಿ ಶೆಡ್ಡ್ ನಿರ್ಮಾಣಗೊಳಿಸಿ ಇದನÀÄ್ನ ಹೆಚ್ಚಿನ ಅಭಿವೃದ್ದಿಗೊಳಿಸಲು ಊರವರು ಒತ್ತಾಯಿಸಿದ್ದಾರೆ. ಅಲ್ಲದೆ ಈ ಸ್ಮಶಾನ ಗುಡ್ಡೆ ಪ್ರದೇಶದಲ್ಲಿದ್ದು ವ್ಯವಸ್ಥಿತ ರಸ್ತೆ ಇಲ್ಲದಿರುವುದರಿಂದ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದ್ದು, ಕಾಂಕ್ರೀಟ್ ಅಥವಾ ಡಾಮಾರು ಮೂಲಕ ರಸ್ತೆ ನಿರ್ಮಾಣಕ್ಕೆ ಸಂಬAಧಪಟ್ಟ ಪಂಚಾಯತ್ ಮುಂದಾಬೇಕೆAದು ಸಾರ್ವಜನಿಕರು ಒತ್ತಾಯಿಸಿದ್ದಾರೆ.