ಕೊಳಕೆ ದೈವಸ್ಥಾನ: ವಾರ್ಷಿಕ ನೇಮೋತ್ಸವ 23ರಿಂದ
ಮಂಜೇಶ್ವರ: ಉದ್ಯಾವರ ಮಾಡ ಕೊಳಕೆ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ಕೋಮರಾಯ ಚಾಮುಂಡೇಶ್ವರೀ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಮಾ.23ರಿಂದ ಜರಗಲಿದೆ. 23ರಂದು ಪ್ರಾತ:ಕಾಲ 6ಕ್ಕೆ ಭಂಡಾರ ಮನೆಯಿಂದ ದೈವಸ್ಥಾನಕ್ಕೆ ಭಂಡಾರ ಹೊರಡುವುದು, 8ಕ್ಕೆ ಗಣಹೋಮ, ಸಂಜೆ 7ಕ್ಕೆ ಭಂಡಾರ ಏರುವುದು, ರಾತ್ರಿ 9ರಿಂದ ಶ್ರೀ ಉಳ್ಳಾಲ್ತಿ, ಶ್ರೀ ಬಿಲ್ಲಾರ, ಶ್ರೀ ಬಬ್ಬರ್ಯ, ಶ್ರೀ ಕೋಮಾರು ಚಾಮುಂಡೇಶ್ವರೀ ದೈವಗಳ ನೇಮೋತ್ಸವ, 24ರಂದು ಬೆಳಿಗ್ಗೆ 7ಕ್ಕೆ ಶ್ರೀ ಪಿಲಿಚಾಮುಂಡಿ ದೈವ, 10ಕ್ಕೆ ಶ್ರೀ ಗುಳಿಗ ದೈವದ ನೇಮೋತ್ಸವ, ಮಧ್ಯಾಹ್ನ ಶ್ರೀ ದೈವಗಳ ಭಂಡಾರ ಇಳಿಯುವುದು ನಡೆಯಲಿದೆ.