ಕೋಟೆಕಣಿಯಲ್ಲಿ ಭಿಕ್ಷು ಲಕ್ಷ್ಮಣಾನಂದಸ್ವಾಮೀಜಿ ಪುಣ್ಯಸ್ಮರಣೆ ಇಂದು

ಕಾಸರಗೋಡು: ಕೋಟೆಕಣಿ ರಾಮನಗರ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಆಶ್ರಯ ದಲ್ಲಿ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿಯವರ 73ನೇ ಪುಣ್ಯ ಸ್ಮರಣೆ ಇಂದು ಸಂಜೆ ೫ರಿಂದ ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ನಡೆಯಲಿದೆ.  ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಜಿಲ್ಲಾ ಸಮಿತಿ ಅಧ್ಯಕ್ಷ ಕಮಲಾಕ್ಷ ಕಲ್ಲುಗದ್ದೆ ದೀಪ ಪ್ರಜ್ವಲನೆಗೈಯ್ಯುವರು. ವಿಶ್ರಾಂತ ಉಪಜಿಲ್ಲಾಧಿಕಾರಿ ವಿದ್ಯಾರತ್ನ ಕುಂಬಳೆ ಅಧ್ಯಕ್ಷತೆ ವಹಿಸುವರು. ಅರಣ್ಯ ಇಲಾಖೆಯ ಡೆಪ್ಯುಟಿ ರೇಂಜ್ ಅಧಿಕಾರಿ ಸುನಿಲ್ ಕುಮಾರ್ ಅಣಂಗೂರು, ನಗರಸಭಾ  ಕೌನ್ಸಿಲರ್ ವರಪ್ರಸಾದ್ ಕೋಟೆಕಣಿ, ವಿದ್ಯಾನಂದ ಹೂಡೆ, ಆಶಾ ರಾಧಾಕೃಷ್ಣ ಭಾಗವಹಿಸುವರು. 

ನಿರಂಜನ ಕೊರಕೋಡು ಅವರಿಗೆ ಭಿಕ್ಷು ಗೌರವಾರ್ಪಣೆ, ಎಸ್‌ಎಸ್ ಎಲ್‌ಸಿಯಲ್ಲಿ ಎಪ್ಲಸ್ ಪಡೆದ ಹರ್ಷಿತ ಕೆ ಕೋಟೆಕಣಿ ಯವರಿಗೆ ಭಿಕ್ಷು ವಿದ್ಯಾಗೌರವ, ಜಗದೀಶ್ ಕೂಡ್ಲು ಇವರಿಗೆ ಭಿಕ್ಷು ಪುಣ್ಯಸ್ಮರಣೆ ಗೌರವ ನೀಡಲಾಗುವುದು. ಹಲವು ಗಣ್ಯರು ಭಾಗವಹಿಸುವರು.

You cannot copy contents of this page