ಕೋಡ್ ಆನ್ ವೇಜಸ್ ರಾಜ್ಯದ ಕಟ್ಟಕಡೆಯ ಕಾರ್ಮಿಕನಿಗೂ ಕನಿಷ್ಠ ವೇತನ ಖಚಿತಪಡಿಸುತ್ತದೆ- ಬಿಎಂಎಸ್
ಕಾಸರಗೋಡು: ಕೋಡ್ ಆನ್ ವೇಜಸ್ ಎಂಬುದು ಕಟ್ಟಕಡೆಯ ಕಾರ್ಮಿಕನಿಗೂ ಕನಿಷ್ಠ ವೇತನ ಖಚಿತ ಪಡಿಸುವ ಇತಿಹಾಸ ತೀರ್ಮಾನವಾಗಿದೆ ಎಂದು ಬಿಎಂಎಸ್ ರಾಷ್ಟ್ರೀಯ ಅಧ್ಯಕ್ಷ ಹಿರಣ್ಮಯ್ ಪಾಂಡ್ಯ ನುಡಿದರು. ಕಾಸರಗೋಡಿನಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಉದ್ಯೋಗರಂಗದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗುವ ನಾಲ್ಕು ಲೇಬರ್ ಕೋಡ್‌ಗಳಲ್ಲಿ ಕೋಡ್ ಆನ್ ವೇಜಸ್, ಸೋಷ್ಯಲ್ ಸೆಕ್ಯೂರಿಟಿ ಕೋಡ್ ಎಂಬೀ ಎರಡು ಕೋಡ್‌ಗಳು ಇತಿಹಾಸಪರವಾಗಿದ್ದು, ತುರ್ತಾಗಿ ಈ ಎರಡೂ ಕೋಡ್‌ಗಳನ್ನು ಜ್ಯಾರಿ ಗೊಳಿಸಬೇಕೆಂದು ಅವರು ಆಗ್ರಹಿಸಿದರು. ಇಂಡಸ್ಟ್ರಿಯಲ್ ರಿಲೇಶನ್ಸ್ ಕೋಡ್, ಒಕ್ಯುಪೇಶನಲ್ ಸೇಫ್ಟಿ ಆಂಡ್ ಹೆಲ್ತ್ ಕೋಡ್ ಎಂಬೀ ಎರಡು ಕೋಡ್‌ಗಳಿಗೆ ಹಲವಾರು ಲೋಪದೋಷಗಳಿದ್ದು, ಇದನ್ನು ಚರ್ಚೆ ಮೂಲಕ ಪರಿಹರಿಸಿ ಮಾತ್ರವೇ ಜ್ಯಾರಿಗೊಳಿಸಬೇಕಾಗಿದೆ. ಸಾಮಾಜಿಕ ಸುರಕ್ಷಾ ಕೋಡ್ ದೇಶದ ಅಸಂಘಟಿತ ವಲಯದ ೪೩ ಕೋಟಿ ಕಾರ್ಮಿಕರಿಗೆ ವಿವಿಧ ಸಾಮಾಜಿಕ ಸುರಕ್ಷಾ ಯೋಜನೆಯ ಲಾಭ ಲಭಿಸುವ ಕೋಡ್ ಎಂಬ ನೆಲೆಯಲ್ಲಿ ತುರ್ತು ಪ್ರಾಮುಖ್ಯದೊಂದಿಗೆ ಜ್ಯಾರಿಗೊಳಿಸಬೇಕೆಂದು ಅವರು ಆಗ್ರಹಿಸಿದರು. ಇಎಸ್‌ಐ, ಇಪಿಎಫ್ ಎಬಿಲಿಟಿ ಪ್ರಸ್ತುತ ಅನುಕ್ರಮವಾಗಿ ೨೧,೦೦೦, ೧೫,೦೦೦ ಎಂಬುದನ್ನು ಇಮ್ಮಡಿಯಾಗಿ ಹೆಚ್ಚಿಸಬೇಕು. ಇಎಸ್‌ಐ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಕರ್ಯ ಹೆಚ್ಚಿಸಬೇಕು. ಪಿಎಫ್ ಪಿಂಚಣಿ ಕನಿಷ್ಠ ೫೦೦೦ ರೂ. ಆಗಿ ಹೆಚ್ಚಿಸಬೇಕು ಮೊದಲಾದ ಬೇಡಿಕೆಗಳನ್ನು ಸಚಿವ ಮನ್ಸೂಕ್ ಮಾಂಡವಿಯರಿಗೆ ನೀಡಿರುವುದಾಗಿ ಅವರು ಅನುಕೂಲ ಪ್ರತಿಕ್ರಿಯೆ ನೀಡಿದ್ದಾರೆಂದು ಪಾಂಡ್ಯ ನುಡಿದರು.
ಬಿಎಂಎಸ್ ರಾಜ್ಯ ಅಧ್ಯಕ್ಷ ಶಿವಜಿ ಸುದರ್ನ್, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಸಿ. ಉಣ್ಣಿಕೃಷ್ಣನ್ ಉಣ್ಣಿತ್ತಾನ್, ರಾಜ್ಯ ಉಪಾಧ್ಯಕ್ಷ ನ್ಯಾಯವಾದಿ ಪಿ. ಮುರಳೀಧರನ್ ಪತ್ರಿಕಾಗೋಷಿ ಯಲ್ಲಿ ಭಾಗವಹಿಸಿದರು.