ಕೋಳಿಕ್ಕಾಲು ಶ್ರೀ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಶ್ರೀದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ನಾಳೆ
ಮುಳ್ಳೇರಿಯ: ಕೋಳಿಕ್ಕಾಲು ಶ್ರೀ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಗಣಪತಿ ಹೋಮ ಸಹಿತ ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು. ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ, ಮಾತೃ ಸಂಗಮ ಆರಂಭಗೊಂಡಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಅಪರಾಹ್ನ 2.30ರಿಂದ ಪಾಂಚ ಜನ್ಯದಲ್ಲಿ ಭಕ್ತಿ ಸಂಗೀತ ಸಂಭ್ರಮ, ಸಂಜೆ ೬ರಿಂದ ಪಾವಂಜೆ ಮೇಳ ದವರಿಂದ ಯಕ್ಷಗಾನ ಬಯಲಾಟ ‘ಶ್ರೀಕೃಷ್ಣ ಲೀಲಾಮೃತ’ ಪ್ರದರ್ಶನ ಗೊಳ್ಳಲಿದೆ. ನಂದಗೋ ಕುಲದಲ್ಲಿ ಬೆಳಿಗ್ಗಿನಿಂದ ಭಜನೆ ಆರಂಭಗೊಂ ಡಿತು. ಸಂಜೆ 6.30ಕ್ಕೆ ಕುಣಿತ ಭಜನೆ ನಡೆಯಲಿದೆ. ನಾಳೆ ಬೆಳಿಗ್ಗೆ ೫ಕ್ಕೆ 108 ತೆಂಗಿನಕಾಯಿ ಗಣಪತಿ ಹೋಮ, ಪ್ರತಿಷ್ಠಾಪಾಣಿ, 7.37ಕ್ಕೆ ಶ್ರೀ ದೇವರ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ ನಡೆಯಲಿರುವುದು. ಸಂಜೆ 6.30ಕ್ಕೆ ತಾಯಂಬಕ, ರಾತ್ರಿ 7.30ರಿಂದ ರಂಗಪೂಜೆ, ಶ್ರೀ ಭೂತಬಲಿ, ವಿಶೇಷ ಬೆಡಿಸೇವೆ, ನರ್ತನ ಬಲಿ, ರಾಜಾಂಗಣ ಪ್ರಸಾದ ನಡೆಯಲಿದೆ.
‘ಪಾಂಚಜನ್ಯ’ದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಅಪರಾಹ್ನ 2.30ರಿಂದ ಮ್ಯಾಜಿಕ್ ಶೋ, ಸಂಜೆ 4ಕ್ಕೆ ಉಡುಪಿ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿರುವುದು.