ಕೋಳ್ಯೂರು ಕ್ಷೇತ್ರ ಕಳವು: ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಪೊಲೀಸರ ಅನಾಸ್ಥೆ ನೀತಿ- ಬಿಜೆಪಿ
ಮಂಜೇಶ್ವರ: ಕೋಳ್ಯೂರು ಕ್ಷೇತ್ರದಲ್ಲಿ ನಡೆದ ಕಳವು ಪ್ರಕರಣದ ಹಿಂದಿನ ಕ್ರಿಮಿನಲ್ಗಳನ್ನು ದಸ್ತಾಗಿರಿ ಗೈಯ್ಯುವ ವಿಷಯದಲ್ಲಿ ಪೊಲೀಸ್ ಅನಾಸ್ಥೆ ನೀತಿ ತೋರುತ್ತಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಹೇಳಿದ್ದಾರೆ. ಈ ಕ್ಷೇತ್ರದಿಂದ ಐವತ್ತು ಪವನ್ಗಿಂತಲೂ ಹೆಚ್ಚು ಚಿನ್ನ ಇತ್ಯಾದಿಗಳು ಕಳವುಹೋಗಿವೆ.
ಆರು ತಿಂಗಳ ಹಿಂದೆ ಇದೇ ದೇವಸ್ಥಾನ ಪರಿಸರದ ಮನೆಯೊಂದರಲ್ಲಿ ಕಳವು ನಡೆದಿದೆ. ಕಳ್ಳರದೆಂದು ಶಂಕಿಸಲಾಗುತ್ತಿರುವ ವಾಹನದ ನಂಬ್ರವನ್ನು ಪೊಲೀಸರಿಗೆ ನೀಡಲಾಗಿತ್ತು. ಆದರೆ ಪೊಲೀಸರ ವತಿಯಿಂದ ಮುಂದಿನ ಯಾವುದೇ ರೀತಿಯ ಕ್ರಮಗಳೂ ಉಂಟಾಗಿಲ್ಲ. ಪರಿಸರದ ನಾಯಿಗಳನ್ನು ವಿಷ ನೀಡಿ ಕೊಲೆಗೈಯ್ಯಲಾಗಿದ್ದು, ಆ ಬಗ್ಗೆಯೂ ಪೊಲೀಸರಿಗೆ ಮಾಹಿತಿ ನೀಡಿದ್ದರೂ, ಪೊಲೀಸರು ಕೈಕಟ್ಟಿ ನಿಂತು ನೋಡಿದ್ದರು. ಗಾಂಜಾ ಇತ್ಯಾದಿ ಮಾದಕ ದ್ರವ್ಯ ಸೇವಿಸುವವರ ಸಂಖ್ಯೆ ಇತ್ತೀಚೆಗಿನಿಂದ ಈ ಪ್ರದೇಶದಲ್ಲಿ ಹೆಚ್ಚಾಗತೊಡಗಿದೆ ಎಂದು ಹೇಳಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು ತಿಳಿಸಿದ್ದಾರೆ.
ಹಿಂದೂ ಸಮೂಹದ ತಾಳ್ಮೆಯನ್ನು ಒಂದು ಬಲಹೀನತೆ ಯನ್ನಾಗಿ ಕಂಡು ಕೈಕಟ್ಟಿ ನಿಂತು ನೋಡಿ ಕುಳಿತಲ್ಲಿ ಆದರಿಂದ ಮುಂದೆ ಉಂಟಾಗಬಹುದಾಗಿರುವ ಪರಿಣಾಮಗಳಿಗೆ ಪೊಲೀಸರು ಮತ್ತು ಗೃಹ ಇಲಾಖೆ ಕಾರಣ ವಾದೀತೆಂದೂ ಹೇಳಿಕೆಯಲ್ಲಿ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.