ಕೌಂಡಿಕಾನ ಯಾತ್ರೆ: ಆಮಂತ್ರಣ ಪತ್ರಿಕೆ ಬಿಡುಗಡೆ
ಅಡೂರು: ಜ.14ರಂದು ನಡೆಯಲಿರುವ ಕೌಂಡಿಕಾನ ಯಾತ್ರೆಯ ಆಮಂತ್ರಣ ಪತ್ರಿಕೆ ಯನ್ನು ಅಡೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಬಿಡುಗಡೆಗೊಳಿಸಿದರು. ಕಾರ್ಯಾಧ್ಯಕ್ಷ ಪ್ರಭಾಕರ ರಾವ್ ಮಂಡೆಬೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪರಂಪರಾಗತ ಮನೆಯ ಪ್ರತಿನಿದಿsಗಳಾದ ಶ್ರೀಪತಿ ರಾವ್ ಗುಂಡಿಮನೆ, ಗಿರಿಧರ್ ರಾವ್ ಚೇರ್ಕಂಡ, ಕಾರ್ಯದರ್ಶಿ ರವಿನಾರಾಯಣ ಮಿತ್ತೊಟ್ಟಿ ಉಪಸ್ಥಿತರಿದ್ದರು. ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಚಂದ್ರಶೇಖರ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಗಂಗಾಧರ ಕಾಂತಡ್ಕ ವಂದಿಸಿದರು.