ಕ್ವಾರ್ಟರ್ಸ್‌ಗೆ ನುಗ್ಗಿ ಹಾನಿ: ಯುವತಿ ವಿರುದ್ಧ ಕೇಸು
ಬದಿಯಡ್ಕ: ಕ್ವಾರ್ಟರ್ಸ್‌ಗೆ ಅತಿಕ್ರಮಿಸಿ ನುಗ್ಗಿ ಹಾನಿಯೆಸಗಿದ ಆರೋಪದಂತೆ ನ್ಯಾಯಾಲಯದ ನಿರ್ದೇಶ ಮೇರೆಗೆ ಬದಿಯಡ್ಕ ಪೊಲೀ ಸರು ಯುವತಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ನೀರ್ಚಾಲ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ದಿ| ಪ್ರಸನ್ನನ್ ಎಂಬವರ ಪತ್ನಿ ಬೇಬಿ (೩೮) ನೀಡಿದ ದೂರಿನಂತೆ ಅದೇ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಪನ್ನಿಪ್ಪಾರೆಯ ಕೊಚ್ಚುಣ್ಣಿ ಎಂಬವರ ಪುತ್ರಿ ಸುಜಾತ ಎಂಬಾಕೆ ವಿರುದ್ಧ ಕೇಸು ದಾಖಲಿಸಲಾಗಿದೆ. ಇತ್ತೀಚೆಗೆ ಬೇಬಿ ವಾಸಿಸುವ ಕ್ವಾರ್ಟರ್ಸ್‌ಗೆ ಅತಿಕ್ರಮಿಸಿ ನುಗ್ಗಿದ ಸುಜಾತ ಹಾನಿಯೆಸಗಿದ ಬಗ್ಗೆ ದೂರಲಾಗಿದೆ. ಈ ಬಗ್ಗೆ ಬೇಬಿ ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ನೀಡಿದ್ದರು. ದೂರು ಸ್ವೀಕರಿಸಿದ ನ್ಯಾಯಾಲಯ ಕೇಸು ದಾಖಲಿಸುವಂತೆ ಬದಿಯಡ್ಕ ಪೊಲೀಸರಿಗೆ ನಿರ್ದೇಶಿಸಿತ್ತು.