ಕ್ವಾರ್ಟರ್ಸ್‌ನಿಂದ ಬೈಕ್ ಕಳವಿಗೆ ಯತ್ನ

ಮಂಜೇಶ್ವರ: ಕ್ವಾರ್ಟರ್ಸ್ನಿಂದ ಬೈಕ್ ಕಳವು ಯತ್ನ ನಡೆದಿದ್ದು, ಈ ಬಗೆ ್ಗ ಸಿಸಿ ಕ್ಯಾಮರದಲ್ಲಿ ಆರೋಪಿಗಳ ದೃಶ್ಯ ಪತ್ತೆಯಾಗಿದೆ. ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಂಜೇಶ್ವರ ಚೌಕಿಯಲ್ಲಿರುವ ಕ್ವಾರ್ಟರ್ಸ್ ವೊಂದರಲ್ಲಿ ನಿಲ್ಲಿಸಲಾಗಿದ್ದ ಬುಲ್ಲೆಟ್ ಬೈಕ್‌ನ್ನು ಬುಧವಾರ ರಾತ್ರಿ ಕಳವುಗೆ ಯತ್ನಿಸಿದ್ದಾರೆ. ಬೆಳಿಗ್ಗೆ ಬೈಕ್‌ನಾಪತ್ತೆಯಾಗಿದ್ದು, ಹುಡುಕಾಡುವ ವೇಳೆ ಗೇಟ್‌ನ ಹೊರಗಡೆ ಪತ್ತೆಯಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆಗೆ ಚಾಲನೆ ನೀಡಿದ್ದಾರೆ. ನಿನ್ನೆ ಪೋಲೀಸರು ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ತಲುಪಿ ಮಾಹಿತಿ ಸಂಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page