ಕ್ಷೇತ್ರ ಪರಿಸರದಲ್ಲಿ ಪ್ರಾಚೀನ ವಿಗ್ರಹ ಅವಶೇಷಗಳು ಪತ್ತೆ

ಕಾಸರಗೋಡು: ಪ್ರಾಚೀನ ವಿಗ್ರಹದ ಅವಶೇಷಗಳು ಹೊಸದುರ್ಗಕ್ಕೆ ಸಮೀಪದ ಮಡಿಕೈ ಮಲಪ್ಪಚೇರಿಯಲ್ಲಿ ಪತ್ತೆಯಾಗಿದೆ. ಮಲಪ್ಪಚ್ಚೇರಿ ಪೊಟ್ಟನ್ ಕುಳಂಗರೆ ಶ್ರೀಕಷ್ಣ ದೇವಸ್ಥಾನದ ಪುನರುದ್ಧಾರಕ್ಕಾಗಿ ಊರವರು ತೀರ್ಮಾನಿಸಿದ್ದರು. ಅದರ ಪೂರ್ವಭಾವಿಯಾಗಿ ಅಷ್ಟಮಂಗಲ ಪ್ರಶ್ನೆ ನಡೆಸಲಾಯಿತು. ಈ ಕ್ಷೇತ್ರ ಪರಿಸರದಲ್ಲಿ ಪ್ರಾಚೀನ ವಿಗ್ರಹದ ಅವಶೇಷಗಳಿವೆ ಎಂಬುದು ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂತು. ಅದರಂತೆ ಊರವರು ಆ ಕ್ಷೇತ್ರ ಪರಿಸರದಲ್ಲಿ ಶೋಧ ಆರಂಭಿಸಿದಾಗ ಕ್ಷೇತ್ರ ಪರಿಸರದಲ್ಲಿ ಪ್ರಾಚೀನ ವಿಗ್ರಹದ ಅವಶೇಷಗಳು ಪತ್ತೆಯಾಗಿದೆ. ಈ ವಿಗ್ರಹ ಅಂದಾಜು ೭೫೪ ವರ್ಷಗಳ ಪ್ರಾಚೀನತೆ ಹೊಂದಿರುವುದಾಗಿ ಅಂದಾಜಿಸಲಾಗಿದೆ. ಮಾಂಙಾಡ್ ಶಶಿಧರನ್ ಜ್ಯೋತಿಷ್ಯರು ಮತ್ತು ಇರಿಯ ರಾಜೇಶ್ ಜ್ಯೋತಿಷ್ಯರ ನೇತೃತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಸಲಾಗಿತ್ತು. ಅದರ ಆಧಾರದಲ್ಲಿ ನಡೆಸಿದ ಶೆಧದಲ್ಲಿ ಈ ಪ್ರಾಚೀನ ವಿಗ್ರಹ ಪತ್ತೆಯಾಗಿದೆ. ಇದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ಊರವರು ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page