ಕ.ಸಾ.ಪ ಕೇರಳ ಗಡಿನಾಡ ಘಟಕದಿಂದ ಕನ್ನಡ ಮೈತ್ರಿ ಸಂಗಮ ನಾಳೆ
ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಇದರ ಆಶ್ರಯದಲ್ಲಿ ಕನ್ನಡ ಮೈತ್ರಿ ಸಂ ಗಮ 30ರಂದು ಸಂಜೆ 4 ಗಂಟೆಗೆ ಕಾಸರಗೋಡು ತಾಳಿಪಡ್ಪು ನಲ್ಲಿರುವ ಉಡುಪಿ ಗಾರ್ಡನ್ ಸಭಾಂಗಣ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಮಾರ್ಗದರ್ಶಕರ, ಯುವ ಕಾರ್ಯಕರ್ತರ, ಕನ್ನಡ ಪರ ಸಂಘಟ ನೆಗಳ ಸಾರಥಿಗಳ ,ಮತ್ತು ಕನ್ನಡ ಪತ್ರಕರ್ತರ ಈ ಸ್ನೇಹಕೂಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೇರಳ ಗಡಿನಾಡ ಘಟಕದ ಮಾಜಿ ಅಧ್ಯಕ್ಷ, ನ್ಯಾಯವಾದಿ ಐ ವಿ ಭಟ್ ರಿಗೆ ಅಭಿನಂದನೆ ಮತ್ತು ಅವರ ‘ಸ್ಥಿತಪ್ರಜ್ಞ ‘ಕೃತಿಯ ಅವಲೋಕನ ನಡೆಯುವುದು. ಹಿರಿಯ ಸಾಹಿತಿ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಗೌರವಾಧ್ಯಕ್ಷ ಡಾ. ರಮಾ ನಂದ ಬನಾರಿ ಅಧ್ಯಕ್ಷತೆ ವಹಿಸುವರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಮಾರ್ಗದರ್ಶಕ ಸಮಿತಿ ಸದಸ್ಯ ಡಾ ಮುರಲೀ ಮೋಹನ ಚೂಂತಾರು, ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ, ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ ಎನ್ .ಕೆ ಮೋಹನ ದಾಸ್ ಮುಖ್ಯ ಅತಿಥಿಗಳಾಗಿರುವರು. ಹಿರಿಯ ಸಾಹಿತಿ ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಗ್ರಂಥ ‘ಸ್ಥಿತಪ್ರಜ್ಞ’ದ ಅವಲೋಕನ ನಡೆಸುವರು.