ಖ್ಯಾತ ಇಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಕಂಪೆನಿ ವಿರುದ್ಧ ನಕಲಿ ವೆಬ್‌ಸೈಟ್: ಜಾಗ್ರತೆ ವಹಿಸಲು ಪೊಲೀಸ್ ಕರೆ

ಕಾಸರಗೋಡು: ಪ್ರಸಿದ್ಧ ಇಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಕಂಪೆನಿಗಳ ಹೆಸರಲ್ಲಿ ನಕಲಿ ವೆಬ್‌ಸೈಟ್ ನಿರ್ಮಿಸಿ ವಂಚಿಸುವ ತಂಡಗಳ ವಿರುದ್ಧ ಜಾಗರೂಕತೆ ವಹಿಸಬೇಕೆಂದು ಸೈಬರ್ ಪೊಲೀಸ್ ಮುನ್ನೆಚ್ಚರಿಕೆ ನೀಡಿದೆ. ಖ್ಯಾತ ಇಲೆಕ್ಟ್ರಿಕ್ ಸ್ಕೂಟರ್ ನಿರ್ಮಾಪಕರದ್ದೆಂಬ ರೀತಿಯಲ್ಲಿ ಕಂಡು ಬರುವ ವೆಬ್‌ಸೈಟ್‌ಗಳನ್ನು ನಿರ್ಮಿಸಿ ವಂಚನೆ ನಡೆಸಲಾಗುತ್ತಿದೆ. ಈ ವೆಬ್‌ಸೈಟ್ ಮೂಲಕ ಕಡಿಮೆ ಬೆಲೆಗೆ ವಾಹನಗಳನ್ನು ನೀಡುವುದಾಗಿ ಪ್ರಚಾರ ಮಾಡಲಾಗುತ್ತಿದೆ. ನಕಲಿ ಬುಕ್ಕಿಂಗ್ ಆಫರ್‌ಗಳು ಅಡಕವಾದ ಜಾಹೀರಾತುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಪಡಿಸಿ ಗ್ರಾಹಕರನ್ನು ಸೆಳೆಯಲಾಗುತ್ತದೆ. ಹಣ ಪಾವತಿಸಿ ಮುಂಗಡ ಕಾಯ್ದಿರಿಸಿದವರಿಗೆ ಆ ಮೊತ್ತ ನಷ್ಟವಾಗುವ ಸಂದರ್ಭವಿದೆ. ಈ ರೀತಿಯ ನಕಲಿ ವೆಬ್‌ಸೈಟ್‌ಗಳ ಬಗ್ಗೆ ತಿಳಿದುಕೊಂಡು ಅವುಗಳ ವಿಳಾಸವನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕಾಗಿದೆ. ಈ ವೆಬ್‌ಸೈಟ್‌ಗಳಲ್ಲಿ ನಿಜವಾದ ಕಂಪೆನಿಗಳ ಹೆಸರಿನಿಂದ ಒಂದು ಅಥವಾ ಎರಡು ಅಕ್ಷರ ಭಿನ್ನವಾಗಿರುವುದನ್ನು ಗಮನಿಸಿ ನಕಲಿ ಎಂದು ಖಚಿತಪಡಿಸಿಕೊಳ್ಳಬಹುದು. ಈ ರೀತಿಯ ವೆಬ್ ಸೈಟ್‌ಗಳು, ವಂಚನೆಗಳು ಕಂಡು ಬಂದರೆ 1930 ಎಂಬ ನಂಬ್ರದಲ್ಲಿ ಕರೆಮಾಡಬೇಕೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page