ಖ್ಯಾತ ತಂತ್ರಿವರ್ಯ ವಾಸುದೇವ ಪಟ್ಟೇರಿ ನಿಧನ
ಹೊಸದುರ್ಗ: ಖ್ಯಾತ ತಂತ್ರಿವರ್ಯ ನೀಲೇಶ್ವರ ಆಲಂಬಾಡಿ ಇಲ್ಲಂ ನಿವಾಸಿ ಬ್ರಹ್ಮಶ್ರೀ ವಾಸುದೇವ ಪಟ್ಟೇರಿ (೫೨) ನಿಧನಹೊಂದಿದರು. ಅಸೌಖ್ಯ ನಿಮಿತ್ತ ತಿರುವನಂತಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಧರ್ಮಸ್ಥಳ ಶ್ರೀ ಮಂಜುನಾಥ ಕ್ಷೇತ್ರ ಸೇರಿದಂತೆ ಕರ್ನಾಟಕ ಹಾಗೂ ಕಾಸರಗೋಡಿನ ನೂರಾರು ಕ್ಷೇತ್ರಗಳ ತಂತ್ರಿಯಾಗಿದ್ದರು. ತಿರುವನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ಕ್ಷೇತ್ರದ ಅರ್ಚಕರಾಗಿದ್ದರು.
ಮೃತರು ಪತ್ನಿ ಸಂಧ್ಯಾರಾಣಿ, ಮಕ್ಕಳಾದ ಶ್ರೀವಾಸ್, ವಿಷ್ಣು ಹಾಗೂ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.