ಖ್ಯಾತ ತಬಲಾ ವಾದಕ ತಾರಾನಾಥ ಭಕ್ತ ನಿಧನ
ಕಾಸರಗೋಡು: ಖ್ಯಾತ ತಬಲಾ ವಾದಕ, ಈ ಹಿಂದೆ ನಗರದ ಚಕ್ಕg ಬಜಾರ್ನಲ್ಲಿ ವಾಸಿಸುತ್ತಿದ್ದು, ಬಳಿಕ ತಾಳಿಪಡ್ಪಿಗೆ ವಸತಿ ಬದಲಾಯಿಸಿದ್ದ ತಾರಾನಾಥ ಭಕ್ತ (38) ನಿಧನಹೊಂದಿದರು.
ಮೃತರು ಕಾಸರಗೋಡು ಶ್ರೀ ವರದರಾಜ ವೆಂಕಟರಮಣ ದೇವ ಸ್ಥಾನದ ಟ್ರಸ್ಟಿ ಹಾಗೂ ಮೆನೇಜಿಂಗ್ ಟ್ರಸ್ಟಿಯಾಗಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ನಗರದ ಚಕ್ಕರಬಜಾರ್ನಲ್ಲಿ ನವರಂಗ್ ಸ್ಟೇಶನರಿ ಮಾರ್ಟ್ ಮತ್ತು ಪ್ರೆಸ್ ಮಾಲಕರೂ ಆಗಿದ್ದರು. ಈಗ ಅವರ ಮಗ ಆ ಪ್ರೆಸ್ನ್ನು ನಗರದ ಶ್ರೀಕೃಷ್ಣ ಟಾಕೀಸಿನ ಎದುರುಗಡೆ ನಿರ್ಮಿಸಲಾಗುತ್ತಿರುವ ಕಟ್ಟಡಕ್ಕೆ ಸ್ಥಳಾಂ ತರಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಕಾಸರಗೋಡು ಗೀತಾ ವಿಹಾರ ಭಜನಾ ಸಂಘದ ಸ್ಥಾಪಕ ಅಧ್ಯಕ್ಷರೂ ಆಗಿರುವ ತಾರಾನಾಥ ಭಕ್ತರು ಖ್ಯಾತ ನಾಟಕ ಸಂಸ್ಥೆಯಾದ ಯವನಿಕಾ ಕಾಸರಗೋಡಿನಲ್ಲೂ ದೀರ್ಘಕಾಲ ಸೇವೆ ಸಲ್ಲಿಸಿದ್ದರು. ಕೆಬಿಟಿ ಬಸ್ಸಿನ ಪಾಲುದಾರರೂ ಆಗಿದ್ದರು. ಹಲವರಿಗೆ ತಬಲಾ ತರಬೇತಿ ನೀಡಿದ್ದ ಇವರು ದಿ| ಅಂಬು ಮಾಸ್ತರ್ರ ಶಿಷ್ಯರಾಗಿದ್ದರು.
ಮೃತರು ಪತ್ನಿ ಗೀತಾ ಭಕ್ತ, ಮಕ್ಕಳಾದ ಮಾಧವ ಭಕ್ತ (ಕಂಪ್ಯೂಟರ್ ಇಂಜಿನಿಯರ್ ಮಂಗಳೂರು), ಪ್ರಶಾಂತ್ ಭಕ್ತ (ನವರಂಗ್ ಸ್ಟೇಷನರಿ ಮಾರ್ಟ್), ಸೊಸೆಯಂದಿರಾದ ಮಹಾಲಸ ಭಕ್ತ, ಶ್ವೇತಾ ಭಕ್ತ, ಸಹೋದರಿಯರಾದ ಸತ್ಯಾವತಿ ಶೆಣೈ, ಅಮಿತ ನಾಯಕ್, ಸಬಿತಾ ಶೆಣೈ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.