ಖ್ಯಾತ ಮನೋರೋಗ ತಜ್ಞೆ ಸುಜಯ ಪಾಂಡ್ಯನ್‌ರಿಗೆ ರಾಜ್ಯೋತ್ಸವ ಪ್ರಶಸ್ತಿ
ಕಾಸರಗೋಡು: ನ್ಯೂಸ್ ಪೇಪರ್ ಅಸೋಸಿಯೇಶನ್ ಆಫ್ ಕರ್ನಾಟಕ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಕಾಸರಗೋಡಿನ ಖ್ಯಾತ ಮನೋರೋಗ ತಜ್ಞೆ ಡಾ| ಸುಜಯ ಪಾಂಡ್ಯನ್ ಆಯ್ಕೆಯಾಗಿದ್ದಾರೆ. ಕಳೆದ 25 ವರ್ಷಗಳಿಂದ ಗಡಿನಾಡಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ಇವರು ಕಾಸರಗೋಡಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದು, ವಿವಿಧ ಕಡೆಗಳಿಗೆ ತೆರಳಿ ಮನೋವೈದ್ಯಕೀಯ ಶಿಬಿರಗಳನ್ನು ನಡೆಸಿದ್ದಾರೆ. ಮೂಲತಃ ಪುತ್ತೂರಿನವರಾದ ಇವರು ಕೌನ್ಸಿಲಿಂಗ್ ಮೂಲಕ ಮನೋರೋಗಗಳನ್ನು ಗುಣಪಡಿಸುತ್ತಿದ್ದಾರೆ. ಗುಣಮುಖರಾದ ಅಸಹಾಯಕ ಮಾನಸಿಕ ಸಂತ್ರಸ್ಥೆಯರನ್ನು ಜೊತೆ ಸೇರಿಸಿ ಸ್ವ-ಉದ್ಯೋಗ ಕಲ್ಪಿಸುವ ಕನಸು ಹೊಂದಿ ಅದಕ್ಕಾಗಿ ಟ್ರಸ್ಟ್ ಸ್ಥಾಪಿಸುವ ಉದ್ದೇಶದಿಂದ ಈಗಾಗಲೇ ತಜ್ಞರ ಜೊತೆ ಮಾತುಕತೆ ನಡೆಸಿದ್ದಾರೆ.
ನವಂಬರ್ 27ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಶ್ರವಣ್‌ಲಕ್ಷ್ಮಣ್ ತಿಳಿಸಿದ್ದಾರೆ.