ಗಮಕ ಅಭಿಯಾನ ಕಾಲದ ಅನಿವಾರ್ಯ- ಡಾ. ಪ್ರಸನ್ನ ರೈ
ಪೈವಳಿಕೆ: ಪುರಾಣ ಕಾವ್ಯಗಳ ಪ್ರಚಾರಕ್ಕೆ ನಡೆಯುತ್ತಿರುವ ಗಮಕ ಅಭಿ ಯಾನ ಕಾಲದ ಅನಿವಾರ್ಯವೆಂದು ಪೆರಡಾಲ ಕವಿತಾಕುಟೀರದ ಕಾರ್ಯ ದರ್ಶಿ ಡಾ. ಪ್ರಸನ್ನ ರೈ ಅಭಿಪ್ರಾಯ ಪಟ್ಟರು. ಗಮಕ ಕಲಾ ಪರಿಷತ್ ಗಡಿ ನಾಡ ಘಟಕ ಕಾಸರಗೋಡು, ಸಿರಿಗನ್ನಡ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ, ತರಂಗಿಣಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್, ಕೈರಳಿ ಕುಟುಂಬಶ್ರೀ ಘಟಕ ಸುಬ್ಬಯ್ಯ ಕಟ್ಟೆ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಗಮಕ ಶ್ರಾವಣ ಕಾರ್ಯಕ್ರಮ ವನ್ನು ಸುಬ್ಬಯ್ಯ ಕಟ್ಟೆ ಬಿ.ಎ. ಮೊ ಮ್ಮದ್ ಸ್ಮಾರಕ ಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಗಮಕ ಕಲಾ ಪರಿಷತ್ ಅಧ್ಯಕ್ಷ ಟಿ. ಶಂಕರನಾರಾ ಯಣ ಭಟ್ ಅಧ್ಯಕ್ಷತೆ ವಹಿಸಿದರು. ತರಂಗಿಣಿ ಗೌರವಾಧ್ಯಕ್ಷ ಅಶೋಕ ಭಂಡಾರಿ, ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಅತಿಥಿಯಾಗಿ ಭಾಗವಹಿ ಸಿದರು. ಹಿರಿಯ ಕೃಷಿಕ ಸುಬ್ಬಯ್ಯಕಟ್ಟೆ ರಿಫಯ್ಯ ಜುಮಾ ಮಸೀದಿ ಅಧ್ಯಕ್ಷ ಬಿ.ಕೆ. ಖಾದರ್ ಹಾಜಿ, ಆರ್‌ಎಸ್‌ಎಸ್ ಪ್ರಚಾರಕ ಬಾಯಾಡಿ ವೆಂಕಟ್ರಮಣ ಭಟ್‌ರನ್ನು ಗೌರವಿಸಲಾಯಿತು. ಮರುವಳ ನಾರಾಯಣ ಭಟ್ ಕುಂಟಂಗೇರಡ್ಕ ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಸೇವಾ ಸಮಿತಿ ಅಧ್ಯಕ್ಷ ಯಜಮಾನ್ ರಾಮಕೃಷ್ಣ ಭಂಡಾರಿ, ಮಸೀದಿಯ ಪ್ರಧಾನ ಕಾರ್ಯದರ್ಶಿ ಬಿ.ಎ. ಲತೀಫ್ ಶುಭ ಕೋರಿದರು.
ಸಿರಿಗನ್ನಡ ವೇದಿಕೆ ಗಡಿನಾಡ ಘಟಕ ಅಧ್ಯಕ್ಷ ವಿ.ಬಿ. ಕುಳಮರ್ವ ಪ್ರಸ್ತಾಪಿಸಿದರು. ಲೈಬ್ರೆರಿ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ, ಪುಷ್ಪ ಕಮಲಾಕ್ಷ ವಂದಿಸಿದರು. ಎಸ್.ಕೆ. ಬಾಲಕೃಷ್ಣ ನಿರೂಪಿಸಿದರು. ವಿಷ್ಣುಶರ್ಮ ನೂಜಿಲ, ಡಾ. ಶ್ರೀಶ ಕುಮಾರ್ ಪಂಜಿತ್ತಡ್ಕರಿಂದ ಗಮಕ ವಾಚನ ವ್ಯಾಖ್ಯಾನ ನಡೆಯಿತು. ಕಾರ್ಯಕ್ರಮ ದಲ್ಲಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಆಯ್ಕೆಯಾದ ಅಬ್ದುಲ್ ರಹಮಾನ್ ಸುಬ್ಬಯ್ಯಕಟ್ಟೆ ಅವರನ್ನು ಅಭಿನಂದಿಸಲಾಯಿತು.