ಗಾಂಜಾ ಬೇಟೆಗಿಳಿದ ಪೊಲೀಸರಿಗೆ ಸಿಕ್ಕಿದ್ದು ಎಂ.ಡಿ.ಎಂ.ಎ: ಇಬ್ಬರ ಬಂಧನ
ಕುಂಬಳೆ: ಗಾಂಜಾ ಬೇಟೆಗಿಳಿದ ಪೊಲೀಸರು ಎಂ.ಡಿ.ಎಂ.ಎ ಸಹಿತ ಇಬ್ಬರನ್ನು ಸೆರೆಹಿಡಿದಿದ್ದಾರೆ. ಮೊಗ್ರಾಲ್ ಪುತ್ತೂರು ಅರಫಾತ್ ನಗರದ ಮುಹಮ್ಮದ್ ಸುಹೈಲ್ (24), ಕಟ್ಟತ್ತಡ್ಕ ವಿಕಾಸ್ನಗರದ ಎಂ.ಕೆ. ಸಿರಾಜುದ್ದೀನ್ (20) ಎಂಬಿವರು ಸೆರೆಗೀಡಾಗಿದ್ದ ಆರೋಪಿಗಳಾಗಿದ್ದಾರೆ. ಕುಂಬಳೆ ಠಾಣೆ ಇನ್ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್.ಐ ವಿ.ಕೆ. ವಿಜಯನ್ ನೇತೃತ್ವದಲ್ಲಿ ನಿನ್ನೆ ಮುಂ ಜಾನೆ ಕುಂಬಳೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆಗಮಿಸಿದ ಬೈಕ್ ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಅದರಲ್ಲಿ 1.05 ಗ್ರಾಂ ಎಂ.ಡಿ.ಎಂ.ಎ ಪತ್ತೆಯಾಗಿದೆ. ಇದರಿಂದ ಆ ಬೈಕ್ನಲ್ಲಿದ್ದ ಇಬ್ಬರನ್ನು ಸೆರೆಹಿಡಿ ಯಲಾಗಿದೆ. ಸೆರೆಗೀಡಾದವರಲ್ಲಿ ಓರ್ವನ ಮೇಲೆ ಕೆಲವು ದಿನಗಳಿಂದ ನಿಗಾ ಇರಿಸಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಾಚರಣೆಯ ಲ್ಲಿ ಸೀನಿಯರ್ ಸಿ.ಪಿ.ಒ ಸುರೇಶ್, ಸಿಪಿಒ ಕಿಶೋರ್ ಎಂಬಿವರಿದ್ದರು.
ಗಾಂಜಾ ಮಾಫಿಯಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ಶಿಲ್ಪಾ ನಿರ್ದೇಶಿಸಿದ್ದರು. ಇದರ ಆಧಾರದಲ್ಲಿ ಜಿಲ್ಲೆಯಾದ್ಯಂತ ರಾತ್ರಿ ವೇಳೆ ಪೊಲೀಸರು ಪಟ್ರೋಲಿಂಗ್ ನಡೆಸುತ್ತಿದ್ದಾಗ ಗಾಂಜಾ, ಎಂ.ಡಿ.ಎಂ.ಎ ಸಹಿತ ಹಲವರು ಸೆರೆಗೀಡಾಗಿದ್ದಾರೆ.