ಗಡಿನಾಡ ಸಾಹಿತ್ಯ ಸಾಂಸ್ಕೃತಿಕ   ಅಕಾಡೆಮಿಯ ಸಾಧಕಾಭಿವಂದನಂ ನಾಳೆ

ನೀರ್ಚಾಲು: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ವತಿಯಿಂದ ಸಾಧಕಾಭಿವಂದನಂ ಅಭಿಯಾನದಂಗವಾಗಿ  ನಾಳೆ ಬೆಳಿಗ್ಗೆ ೯ ಗಂಟೆಗೆ ಕನ್ನೆಪ್ಪಾಡಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಗಡಿನಾಡ ಕನ್ನಡಿಗ, ದೆಹಲಿಯ ಕೇರಳ ಹೌಸ್‌ನಲ್ಲಿ ಕೇರಳ ಸರಕಾರದ ಹೆಚ್ಚುವರಿ ಕಾರ್ಯ ದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಮುಹಮ್ಮದ್ ಕುಂಞಿ ಕನ್ನೆಪ್ಪಾಡಿ ಯವರನ್ನು ಸನ್ಮಾನಿಸಲಾಗುವುದು.

ಪಂಚಾಯತ್ ಅಧ್ಯಕ್ಷ ಡಿ. ಶಂಕರ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಕೆ.ಆರ್. ಸುಬ್ಬಯ್ಯ ಕಟ್ಟೆ ಅಭಿನಂದಿಸುವರು. ಮಲಬಾರ್ ದೇವಸ್ವಂ ಮಂಡಳಿ ಸದಸ್ಯ ಎ.ಕೆ. ಶಂಕರ, ಮುಹಮ್ಮದಾಲಿ ಪೆರ್ಲ, ಅಕ್ಷತಾರಾಜ್ ಪೆರ್ಲ ಸಹಿತ ಹಲವರು ಭಾಗವಹಿಸುವರು.

RELATED NEWS

You cannot copy contents of this page