ಗೂಡಂಗಡಿ ವ್ಯಾಪಾರಿ, ಮಗನಿಗೆ ತಂಡದಿಂದ ಹಲ್ಲೆ
ಕುಂಬಳೆ: ಗೂಡಂಗಡಿ ವ್ಯಾಪಾರಿ ಹಾಗೂ ಅವರ ಮಗನಿಗೆ ತಂಡ ವೊಂದು ಹಲ್ಲೆ ನಡೆಸಿದ ಬಗ್ಗೆ ದೂರಲಾಗಿದೆ.
ಬಂಬ್ರಾಣ ಅಂಡಿತ್ತಡ್ಕದ ರಮೇಶ್ 48). ಪುತ್ರ ರಜಿತ್ (18) ಹಲ್ಲೆಯಿಂದ ಗಾಯಗೊಂ ಡಿದ್ದಾರೆ. ಈ ಸಂಬಂಧ ಬಂಬ್ರಾಣ ಬತ್ತೇರಿ ನಿವಾಸಿ ಸಹೋದರರಾದ ಹರೀಶ್, ಯೋಗೀಶ್, ಸತೀಶ್ ಎಂಬಿವರ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ. ಬಂಬ್ರಾಣ ಅಂಡಿತ್ತಡ್ಕದಲ್ಲಿ ನಿನ್ನೆ ಹಗಲು ಕಬಡ್ಡಿ ಪಂದ್ಯಾಟ ನಡೆದಿತ್ತು. ಈ ವೇಳೆ ಅಲ್ಲಿ ಗೂಡಂಗಡಿ ನಡೆಸುತ್ತಿದ್ದ ರಮೇಶ್ ಬಳಿಗೆ ತಲುಪಿದ ತಂಡ ವಿನಾ ಕಾರಣ ವಾಗ್ವಾದ ನಡೆಸಿ ಹಲ್ಲೆ ಗೈದಿದೆ. ಅದನ್ನು ತಡೆಯಲೆತ್ನಿಸಿದ ರಮೇಶ್‌ರ ಪುತ್ರ ರಜಿತ್‌ಗೂ ತಂಡ ಹಲ್ಲೆಗೈದಿದೆಯೆಂದು ದೂರಲಾಗಿದೆ. ಹಲ್ಲೆಯಿಂದ ಗಾಯಗೊಂಡ ರಮೇಶ್, ರಜಿತ್ ಕುಂಬಳೆ ಸಿಎಚ್‌ಸಿಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.