ಗೃಹಿಣಿ ಬಾವಿಗೆ ಬಿದ್ದು ಮೃತ್ಯು
ಹೊಸದುರ್ಗ: ಮಡಿಕೈ ಕಾಲಿ ಚ್ಚಂಪುದಿ ಕಣ್ಣಿ ಪ್ಪಾರದ ನಿವಾಸಿ ಬಾಲಕೃಷ್ಣನ್‌ರ ಪತ್ನಿ ಶೀನ (48) ಬಾವಿಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಿನ್ನೆ ರಾತ್ರಿ 9 ಗಂಟೆ ವೇಳೆ ಮನೆ ಸಮೀಪದ ಬಾವಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. 15 ಅಡಿ ಆಳದ ಬಾವಿಯಲ್ಲಿ ನಾಲ್ಕು ಅಡಿ ನೀರು ಇದೆ. ಕಾಞಂಗಾಡ್‌ನಿಂದ ಅಗ್ನಿಶಾಮಕ ದಳ ತಲುಪಿ ಮೃತದೇಹವನ್ನು ಮೇಲೆತ್ತಿ ಜಿಲ್ಲಾ ಸ್ಪತ್ರೆಗೆ ತಲುಪಿಸಿದ್ದಾರೆ.
ಸ್ನಾನಕ್ಕೆಂದು ತೆರಳಿದ್ದ ಶೀನ ಅರ್ಧ ಗಂಟೆ ಕಳೆದರೂ ಹಿಂತಿರುಗದ ಹಿನ್ನೆಲೆಯಲ್ಲಿ ಸ್ಥಳೀಯರು ನಡೆಸಿದ ತಪಾಸಣೆಯಲ್ಲಿ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ.ಮೃತರು ಮಕ್ಕ ಳಾದ ಸಿದ್ಧಾರ್ಥ, ಶಿಲ್ಪ, ಅಳಿಯ ಸಚಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.