ಗೃಹ ಇಲಾಖೆ ವಿರುದ್ಧ ಆಡಳಿತ ಪಕ್ಷದ ಶಾಸಕನ ಬಹಿರಂಗ ಹೇಳಿಕೆ: ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನಾ ಮೆರವಣಿಗೆ
ಕಾಸರಗೋಡು: ಆಡಳಿತ ಪಕ್ಷದ ಶಾಸಕ ಪಿ.ವಿ. ಅನ್ವರ್ ಗೃಹ ಇಲಾಖೆ ವಿರುದ್ಧ ಹೊರಿಸಿದ ಆರೋಪದ ಹಿನ್ನೆಲೆಯಲ್ಲಿ ಗೃಹ ಇಲಾಖೆಯ ಹೊಣೆಯಿರುವ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು, ಮುಖ್ಯಮಂತ್ರಿಯ ಕಚೇರಿಯ ಅಪರಾಧಿಗಳನ್ನು ಹೊರಗೆ ತಳ್ಳಬೇಕು ಎಂಬೀ ಬೇಡಿಕೆಗಳನ್ನು ಮುಂದಿಟ್ಟು ಕೆಪಿಸಿಸಿಯ ಆಹ್ವಾನ ಪ್ರಕಾರ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಹೊಸಬಸ್ ನಿಲ್ದಾಣದಿಂದ ಹಳೆ ಬಸ್ ನಿಲ್ದಾಣಕ್ಕೆ ನಡೆದ ಮೆರವಣಿಗೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ. ನೀಲಕಂಠನ್, ಇತರ ಮುಖಂಡರಾದ ಎಂ.ಸಿ. ಪ್ರಭಾಕರನ್, ಎಂ. ಕುಞಂಬು ನಂಬ್ಯಾರ್, ಸಿ.ವಿ. ಜೇಮ್ಸ್, ಪಿ.ವಿ. ಸುರೇಶ್ ಸಹಿತ ಹಲವರು ಭಾಗವಹಿಸಿದರು.