ಗೋಳಿತ್ತಾರು ಮಂದಿರ: ಬೆಳ್ಳಿಯ ಛಾಯಾಚಿತ್ರ ಪ್ರತಿಷ್ಠೆ 24ರಿಂದ
ಪೆರ್ಲ: ಇಲ್ಲಿಗೆ ಸಮೀಪದ ಗೋಳಿತ್ತಾರು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ 14ನೇ ವಾರ್ಷಿಕ ಮಹೋತ್ಸವ ಮತ್ತು ಶ್ರೀ ದೇವರ ಬೆಳ್ಳಿಯ ಛಾಯಾ ಚಿತ್ರ ಪ್ರತಿಷ್ಠ ಮಹೋತ್ಸವ ಈ ತಿಂಗಳ 24,25 ರಂದು ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.24ರಂದು ಸಂಜೆ 3ಕ್ಕೆ ಸಿದ್ಧಿವಿನಾಯಕ ದೇವರ ಬೆಳ್ಳಿಯ ಛಾಯಾ ಚಿತ್ರ ಶೋಭಾ ಯಾತ್ರೆ ಮತ್ತು ಹಸಿರು ಹೊರೆಕಾಣಿಕೆ ಬಜಕೂಡ್ಲು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ದಿಂದ ಹೊರಡಲಿದೆ. ಸಂಜೆ 5ಕ್ಕೆ ತಂತ್ರಿವರ್ಯರ ಆಗಮನ ಪೂರ್ಣ ಕುಂಭ ಸ್ವಾಗತ, ಉಗ್ರಾಣ ಮುಹೂರ್ತವನ್ನು ಮಹೇಶ್ ಉಪಾಧ್ಯಾಯ ಸಾರಡ್ಕ ನೆರವೇರಿಸುವರು. ಬಳಿಕ ಸುದರ್ಶನ ಹೋಮ,ವಾಸ್ತು ಹೋಮ ಸಹಿತ ವೈದಿಕ ಕಾರ್ಯಕ್ರಮಗಳು ನಡೆಯಲಿದೆ. 25ರಂದು ಬೆಳಿಗ್ಗೆ 108 ಕಾಯಿ ಗಣಪತಿ ಹೋಮ, ಭಜನೆ, 10.40ರ ಶುಭಮುಹೂರ್ತದಲ್ಲಿ ಶ್ರೀ ಸಿದ್ಧಿವಿನಾಯಕ ದೇವರ ಬೆಳ್ಳಿಯ ಛಾಯಾ ಚಿತ್ರ ಪ್ರತಿಷ್ಠೆ, ಸಾನ್ನಿಧ್ಯ ಕಲಶ, ಸಾರ್ವಜನಿಕ ಶ್ರೀ ಸತ್ಯ ನಾರಾಯಣ ಪೂಜೆ ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಮಾಣಿಲ ಶ್ರೀ ಧಾಮದ ಶ್ರೀ ಮೋಹನ ದಾಸ ಪರಮಹಂಸ ಸ್ವಾಮೀಜಿ, ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಕೃಷ್ಣ ಗುರೂಜಿ ಆಶೀರ್ವಚನ ನೀಡುವರು. ಎಣ್ಮಕಜೆ ಪಂ ಅಧ್ಯಕ್ಷ ಸೋಮಶೇಖರ ಜೆ ಎಸ್ ಅಧ್ಯಕ್ಷತೆ ವಹಿಸುವರು. ಕಶೆಕೋಡಿಸೂರ್ಯ ನಾರಾಯಣ ಭಟ್ ಧಾರ್ಮಿಕ ಉಪನ್ಯಾಸ ನೀಡುವರು. ವೇ. ಮೂ. ಚಂದ್ರ ಶೇಖರ್ ಭಟ್ ಮೊಗೇರು, ಅಜಯ್ ಪೈ, ಪುತ್ತಿಗೆ ಪಂ. ಅಧ್ಯಕ್ಷ ಸುಬ್ಬಣ್ಣ ಆಳ್ವ, ಲಕ್ಷ್ಮೀ ನಾರಾಯಣ ಬಾಳೆಕಲ್ಲು ಸಹಿತ ಹಲವರು ಉಪಸ್ಥಿತರಿರುವರು.ಮಧ್ಯಾಹ್ನ 1. ರಿಂದ ಅನ್ನಸಂತರ್ಪಣೆ, ಸಂಜೆ 3 ರಿಂದ ವಿವಿಧ ಭಜನಾ ಸಂಘ ಗಳಿಂದ ಸಂಕೀರ್ತನೆ,ರಾತ್ರಿ 7.30 ರಿಂದ ಸಾರ್ವಜನಿಕ ದುರ್ಗಾ ಪೂಜೆ, ಭಜನೆ ಮಂಗಳ, ರಾತ್ರಿ 8ರಿಂದ ಅನ್ನಸಂತರ್ಪಣೆ.9ರಿAದ ಸ್ಥಳೀಯರಿಂದ ನೃತ್ಯ ವೈವಿದ್ಯ, 10ರಿಂದ “ಕಾಸ್ ದ ಕಾಸರತ್ತ್” ನಾಟಕ ಪ್ರದರ್ಶನ ಗೊಳ್ಳಲಿದೆ.