ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಹೈನುಗಾರಿಕೆ ತರಬೇತಿ
ಉಪ್ಪಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೈತ ಕ್ಷೇತ್ರ ಪಾಠಶಾಲೆಯಡಿ ಹೈನುಗಾರಿಕೆ ತರಬೇತಿ ಕುಂಬಳೆ ವಲಯದ ಕೋಟೆ ಕ್ಕಾರ್ನ ಲಕ್ಷ್ಮಿ ಎಂಬವರ ಮನೆಯಲ್ಲಿ ನಡೆಯಿತು. ಪಂಚಾಯ ತ್ ಮಾಜಿ ಸದಸ್ಯ ಮುರಳೀಧರ ಯಾದವ್ ಉದ್ಘಾಟಿಸಿದರು. ಕೋಟೆಕ್ಕಾರು ಒಕ್ಕೂಟದ ಅಧ್ಯಕ್ಷೆ ಜಯಂತಿ ಅಧ್ಯಕ್ಷತೆ ವಹಿಸಿದರು. ಲಕ್ಷ್ಮಿ ಗಣೇಶ್ ಪ್ರಸಾದ್, ರಮೇಶ್ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿ ಲಕ್ಷ್ಮಿ ಹೈನುಗಾರಿಕೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು. 45 ಮಂದಿ ತರಬೇತಿಯಲ್ಲಿ ಭಾಗವಹಿಸಿದರು. ಮೇಲ್ವಿಚಾರಕ ರಮೇಶ್ ಸ್ವಾಗತಿಸಿ, ಮೇಲ್ವಿಚಾರಕಿ ಪ್ರಿಯಾ ನಿರೂಪಿಸಿ, ಸೇವಾ ಪ್ರತಿನಿಧಿ ಸ್ವರ್ಣಲತಾ ವಂದಿಸಿದರು.