ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್: ಗಡಿನಾಡಿಗೂ ಅನ್ವಯಗೊಳಿಸಲು ಒತ್ತಾಯ
ಕಾಸರಗೋಡು: ನಿನ್ನೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಮುಂಗಡಪತ್ರದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ಯೋಜನೆಯನ್ನು ಘೋಷಿಸಿರುವುದಕ್ಕೆ ಮುಖ್ಯಮಂತ್ರಿ ಹಾಗೂ ಸಾರಿಗೆ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಇವರಿಗೆ ಪತ್ರಕರ್ತರ ಪರವಾಗಿ ಕೃತಜ್ಞತೆ ಸೂಚಿಸಲಾಗಿದೆ, ದಾವಣಗೆರೆಯಲ್ಲಿ ಇತ್ತೀಚೆಗೆ ನಡೆದ ಪತ್ರಕರ್ತ ಸಂಘದ ೩೮ನೇ ರಾಜ್ಯ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಈ ಭರವಸೆ ನೀಡಿದ್ದರು.
ಇದಕ್ಕಾಗಿ ಯತ್ನಿಸಿದ ಮುಖ್ಯ ಮಂತ್ರಿಯ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಕೆಯುಡಬ್ಲುಜೆ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರುರವರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಯೋಜನೆ ಯನ್ನು ಗಡಿನಾಡ ಪತ್ರಕರ್ತರಿಗೂ ಅನ್ವಯಗೊಳಿ ಸಬೇ ಕೆಂದು ಕರ್ನಾಟಕ ರಾಜ್ಯ ಪತ್ರ ಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಖಿಲೇಶ್ ನಗು ಮುಗಂ ಕನ್ನಡ ಪತ್ರಕರ್ತರ ಪರವಾಗಿ ಸರಕಾರ ಹಾಗೂ ಪತ್ರಕರ್ತರ ಸಂಘದ ರಾಜ್ಯ ಅಧಕ್ಷ ಶಿವಾನಂದ ತಗಡೂರು ರವರನ್ನು ಒತ್ತಾಯಿಸಿದ್ದಾರೆ.