ಗ್ರಾಮೀಣ ಬ್ಯಾಂಕ್ ಎಡನೀರು ಶಾಖೆಯಲ್ಲಿ ನಕಲಿ ದಾಖಲೆ ಸಲ್ಲಿಸಿ 9.5 ಲಕ್ಷ ರೂ. ಲಪಟಾವಣೆ: ಎಂಟು ಮಂದಿ ವಿರುದ್ಧ ಕೇಸು
ಕಾಸರಗೋಡು: ಮಾಲಕತ್ವ ಪ್ರಮಾಣಪತ್ರ ಹಾಗೂ ತೆರಿಗೆ ರಶೀದಿಯನ್ನು ನಕಲಿಯಾಗಿ ತಯಾರಿಸಿ ಬ್ಯಾಂಕ್ನಿಂದ 9.5 ಲಕ್ಷ ರೂಪಾಯಿ ಪಡೆದು ವಂಚಿಸಿದ ಬಗ್ಗೆ ದೂರಲಾಗಿದೆ. ಕೇರಳ ಗ್ರಾಮೀಣ ಬ್ಯಾಂಕ್ನ ಎಡನೀರು ಶಾಖೆ ಮೆನೇಜರ್ ಸೋನಿ ರೇಶ್ಮಾ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ನೆಕ್ರಾಜೆ ಪಿಲಿಕೂಡ್ಲುವಿನ ಹನೀಫ, ಆಲಂಗೋಲ್ ಹೌಸ್ನ ರಸಿಯಾ, ಎನ್. ಮುಹಮ್ಮದ್ ಹನೀಫ್, ನಿಯಾಸ್, ನೆಕ್ರಾಜೆ ಆಲಂಗೋಲ್ ಹೌಸ್ನ ಎ.ಕೆ. ಸಫ್ವಾನ, ಪಿಲಿಕೂಡ್ಲುವಿನ ಪಿ.ಎ. ಶಿಹಾಬ್, ಅಬ್ದುಲ್ ಹಾರಿಸ್, ನೆಕ್ರಾಜೆ ಆಲಂಗೋಲ್ ಹೌಸ್ನ ಅಬ್ದುಲ್ ಶರೀಫ್ ಎಂಬಿವರ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
2019 ಜುಲೈ 16ರಿಂದ ನವಂಬರ್ ೫ರ ವರೆಗಿನ ಕಾಲಾವಧಿ ಯಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಸಾಲ ತೆಗೆದು ವಂಚಿಸಿರುವುದಾಗಿ ದೂರಲಾಗಿದೆ.