ಘೋಷಿತ ಕ್ಷಾಮ ಭತ್ತೆಯ ಬಾಕಿ ಹಣ ನೀಡಲು ಸರಕಾರ ಸಿದ್ಧವಾಗಬೇಕು-ಎನ್ಜಿಒ ಸಂಘ್
ಕಾಸರಗೋಡು: ಆರ್ಥಿಕ ಸಂದಿಗ್ಧತೆಯ ಹೆಸರಲ್ಲಿ ಸರಕಾರಿ ನೌಕರರಿಗೆ ನಿಷೇಧಿಸಿದ ೨೧ ಶೇ. ಕ್ಷಾಮ ಭತ್ತೆಯ ಮೊದಲ ಒಂದು ಕಂತು ೨ ಶೇ. ಘೋಷಿದಾಗ ಅದರ ಉಳಿದ ಮೊತ್ತ ನೀಡಲು ಸಿದ್ಧವಾಗದ ಸರಕಾರದ ನೀತಿ ವಂಚನಾಪರವೆಂದೂ, ೨೦೨೧ ಜನವರಿಯಿಂದ ೨೦೨೪ ಮಾರ್ಚ್ ವರೆಗಿನ ಕ್ಷಾಮಭತ್ತೆ ನಗದಾಗಿ ನೀಡಲು ಸರಕಾರ ಸಿದ್ಧವಾಗಬೇಕೆಂದು ಅಲ್ಲದಿದ್ದರೆ ತೀವ್ರ ಹೋರಾಟಕ್ಕೆ ಮುಂದಾಗುವುದಾಗಿ ಕೇರಳ ಎನ್.ಜಿ.ಒ. ಸಂಘ್ ಎಚ್ಚರಿಸಿದೆ. ೩೯ನೇ ಜಿಲ್ಲಾ ಸಮ್ಮೇಳನವನ್ನು ಸಂಘಟನೆ ರಾಜ್ಯ ಕಾರ್ಯದರ್ಶಿ ಎ.ಇ. ಸಂತೋಷ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ರಂಜಿತ್ ಕೆ. ಅಧ್ಯಕ್ಷತೆ ವಹಿಸಿದರು. ತಪಸ್ಯ ರಾಜ್ಯ ಸಮಿತಿ ಸದಸ್ಯ ಪ್ರಶಾಂತ್ ಬಾಬು ಕೈತಪ್ರಂ ಪ್ರಧಾನ ಭಾಷಣ ಮಾಡಿದರು. ಬಿ.ಎಂ.ಎಸ್. ಜಿಲ್ಲಾ ಕಾರ್ಯದರ್ಶಿ ವಿ. ಬಾಬು, ಎನ್.ಟಿ.ಯು ಜಿಲ್ಲಾ ಅಧ್ಯಕ್ಷ ಕೃಷ್ಣನ್ ಟಿ, ಪೆನ್ಶನರ್ಸ್ ಸಂಘ್ ಜಿಲ್ಲಾ ಉಪಾ ಧ್ಯಕ್ಷ ಕೇಶವ ಭಟ್, ಗಜೆಟೆಡ್ ಆಫೀ ಸರ್ಸ್ ಸಂಘ್ ಜಿಲ್ಲಾ ಕಾರ್ಯದರ್ಶಿ ಎಂ. ಗಂಗಾಧರ, ಎಬಿವಿಪಿ ರಾಜ್ಯ ಸಮಿತಿ ಸದಸ್ಯ ಆರ್ಯಲಕ್ಷ್ಮೀ ಎಂ. ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಶ್ಯಾಮ್ಪ್ರಸಾದ್ ವಿ. ಸ್ವಾಗತಿಸಿ, ಜೊತೆ ಕಾರ್ಯದರ್ಶಿ ರವಿ ಕುಮಾರ್ ಕೆ. ವಂದಿಸಿದರು. ಸಮಾರೋಪ ಸಮಾರಂಭವನ್ನು ರಾಜ್ಯ ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯ ಪಿ. ಪೀತಾಂಬರನ್ ಉದ್ಘಾಟಿಸಿದರು.
ನೂತನ ಪದಾಧಿಕಾರಿಗಳಾಗಿ ರಂಜಿತ್ ಕೆ. (ಅಧ್ಯಕ್ಷ), ಸುರೇಶ್ ನಾಯ್ಕ್, ದೇವದಾಸ್ (ಉಪಾಧ್ಯಕ್ಷರು), ಶ್ಯಾಮ್ಪ್ರಸಾದ್ ವಿ. (ಕಾರ್ಯದರ್ಶಿ), ರಾಜೀವ್ ರಾಘವನ್, ರಾಜೇಶ್ ನೆಕ್ರಾಜೆ (ಜೊತೆ ಕಾರ್ಯದರ್ಶಿಗಳು), ರವಿ ಕುಮಾರ್ ಕೆ. (ಕೋಶಾಧಿಕಾರಿ) ಆಯ್ಕೆಯಾದರು.