ಚಂದ್ರಗಿರಿ ರಾಜ್ಯ ಹೆದ್ದಾರಿ ಕೂಡಲೇ ಸಂಚಾರಯೋಗ್ಯಗೊಳಿಸಲು ಎಂ.ಎಲ್. ಅಶ್ವಿನಿ ಆಗ್ರಹ
ಕಾಸರಗೋಡು: ಕಾಸರಗೋಡು- ಕಾಞಂಗಾಡ್ ರಾಜ್ಯ ಹೆದ್ದಾರಿಯಲ್ಲಿ 57 ಸ್ಥಳಗಳಲ್ಲಿ ದುರಸ್ತಿ ಕಾಮಗಾರಿಗಳನ್ನು ನಡೆಸಿ ಕೂಡಲೇ ಸಂಚಾರಯೋಗ್ಯ ಗೊಳಿಸಬೇಕೆಂದು ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿ ದರು. ದುರಸ್ತಿ ಕಾಮಗಾರಿಗಳನ್ನು ನಡೆಸಲು ಸರಕಾರ ಹಣ ಮಂಜೂರು ಮಾಡು ವುದಿಲ್ಲವೆಂದು ಲೋಕೋಪಯೋಗಿ ಇಲಾಖೆ ರಸ್ತೆ ವಿಭಾಗ ಇಂಜಿನಿಯರ್ ಒಪ್ಪಿಕೊಂಡಿದ್ದಾರೆ. ರಾಜ್ಯ ಹೆದ್ದಾರಿಯ ಪುನರ್ ನಿರ್ಮಾಣ ನಡೆದು ಆರು ವರ್ಷ ಕಳೆದರೂ ದುರಸ್ತಿ ಕಾಮ ಗಾರಿಗಳನ್ನು ಸರಿಯಾಗಿ ನಡೆಸಲಾಗಿಲ್ಲ. ಪ್ರಸ್ತುತ ಈ ರಸ್ತೆಯಲ್ಲಿ 300ಕ್ಕೂ ಅಧಿಕ ಹೊಂಡಗಳು ಇದೆ ಎಂದು ಲೆಕ್ಕಹಾಕಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಬೃಹತ್ ವಾಹನಗಳು ಸಹಿತ ಹೆಚ್ಚಿನ ವಾಹನಗಳು ರಾಜ್ಯ ಹೆದ್ದಾರಿಯಲ್ಲಿ ಸಾಗುತ್ತಿದ್ದು, ಇದರಿಂದ ಸಂಚಾರ ಇನ್ನಷ್ಟು ಸಂಕಷ್ಟಪೂರ್ಣವಾಗಿದೆ ಎಂದು, ಅಪಾಯ ಸಾಧ್ಯತೆ ಹೆಚ್ಚಾಗಿದೆ ಎಂದು ಅಶ್ವಿನಿ ಸೂಚಿಸಿದರು.