ಚಂದ್ರಗಿರಿ ಸೇತುವೆ: ನಗರಸಭೆಯ ಮನವಿಗೆ ಫಲ: ಕಬ್ಬಿಣದ ಬೇಲಿ, ಬೀದಿ ದೀಪ ಸ್ಥಾಪಿಸಲು ಕ್ರಮ
ಕಾಸರಗೋಡು: ಕೇರಳ ಲೋಕೋಪಯೋಗಿ ಇಲಾಖೆಯ ಅಧೀನದ ಚಂದ್ರಗಿರಿ ರಸ್ತೆಯಲ್ಲಿರುವ ಚಂದ್ರಗಿರಿ ಸೇತುವೆಯಲ್ಲಿ ಕಬ್ಬಿಣದ ಬೇಲಿ, ದೀಪಗಳನ್ನು ಸ್ಥಾಪಿಸುವುದಕ್ಕೆ ಅಗತ್ಯದ ಕ್ರಮಗಳನ್ನು ಸ್ವೀಕರಿಸಬೇಕೆಂದು ಆಗ್ರಹಿಸಿ ನಗರಸಭಾ ಅಧ್ಯಕ್ಷ ವಿ.ಎಂ. ಮುನೀರ್ ಲೋಕೋಪಯೋಗಿ ಇಲಾಖೆಗೆ ನೀಡಿದ ಮನವಿಯಲ್ಲಿ ಕ್ರಮ ಉಂಟಾಗುತ್ತಿದೆ. ಸೇತುವೆಯಲ್ಲಿ ಬೀದಿ ದೀಪಗಳನ್ನು ಸ್ಥಾಪಿಸುವುದಕ್ಕೆ ಲೋಕೋಪಯೋಗಿ ಸೇತುವೆ ವಿಭಾಗ ಎಕ್ಸಿಕ್ಯೂಟಿವ್ ಇಂಜಿನಿಯರ್ ಚೆಮ್ಮನಾಡ್ ಪಂ.ಗೆ ಅನುಮತಿ ನೀಡಿ ಕಬ್ಬಿಣದ ಬೇಲಿ ಸ್ಥಾಪಿಸುವುದಕ್ಕೆ ನಗರಸಭೆಯನ್ನು ಸಂಪರ್ಕಿಸಿ ಸಮಗ್ರ ವರದಿ ಸ್ಕೆಚ್ ಸಹಿತ ಸಲ್ಲಿಸುವುದಕ್ಕೆ ಲೋಕೋಪಯೋಗಿ ಇಲಾಖೆ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ಗೆ ನಿರ್ದೇಶ ನೀಡಿದ್ದಾರೆ.
ಚಂದ್ರಗಿರಿ ಸೇತುವೆಯಲ್ಲಿ ವರ್ಷಗಳ ಹಿಂದೆ ಕಾಸರಗೋಡು ನಗರಸಭೆ ದೀಪಗಳನ್ನು ಸ್ಥಾಪಿಸಿತ್ತು. ಬಳಿಕ ರಸ್ತೆಯ ಅಭಿವೃದ್ಧಿ ಹಿನ್ನೆಲೆಯಲ್ಲಿ ಕೆ.ಎಸ್.ಟಿ.ಪಿ.ಯ ಅಧೀನಕ್ಕೆ ನೀಡಲಾಗಿತ್ತು. ಆ ವೇಳೆ ದೀಪಗಳನ್ನು ತೆರವುಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರಸಭೆ ನೀಡಿದ ಮನವಿಯಲ್ಲಿ ಪರಿಹಾರ ಕ್ರಮ ಉಂಟಾಗುತ್ತಿದೆ.