ಚರಂಡಿಗೆ ಬಿದ್ದ ಕಾರು: ಸ್ಥಳೀಯರ ಕಾರ್ಯಾಚರಣೆಯಿಂದ ಪ್ರಯಾಣಿಕರು ಪಾರು
ಮಂಗಲ್ಪಾಡಿ: ತೆರೆದ ಸ್ಥಿತಿಯಲ್ಲಿದ್ದ ಚರಂಡಿಗೆ ಕಾರೊಂದು ಬಿದ್ದಿದ್ದು, ಸ್ಥಳೀಯರು ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ನಿನ್ನೆ ರಾತ್ರಿ ಸುಮಾರು 8ಗಂಟೆಗೆ ಸುರಿದ ಜೋರಾದ ಮಳೆಯ ವೇಳೆ ಈ ಘಟನೆ ನಡೆದಿದೆ. ಪ್ರತಾಪನಗರದ ಒಳ ರಸ್ತೆಯ ಕಿರು ಸಂಕದ ತೆರೆದ ಸ್ಥಿತಿಯಲ್ಲಿರುವ ಚರಂಡಿಗೆ ಕಾರು ಬಿದ್ದಿದೆ. ಪ್ರತಾಪನಗರ ಪರಿಸರದಲ್ಲಿ ಮೆಹಂದಿ ಕಾರ್ಯಕ್ರಮಕ್ಕೆ ಮಂಗಳೂರು ಭಾಗದಿಂದ ಮಹಿಳೆಯರ ಸಹಿತ 6 ಮಂದಿಯ ಕುಟುಂಬವೊAದು ಸಂಚರಿಸುತ್ತಿರುವಾಗ ಹಿಂಬದಿಯ ಚಕ್ರ ಭಾರೀ ಆಳದ ಚರಂಡಿಗೆ ಬಿದ್ದಿದೆ. ಮಾಹಿತಿ ತಿಳಿದು ಕೂಡಲೇ ಮಳೆಯನ್ನು ಲೆಕ್ಕಿಸದೆ ಸ್ಥಳೀಯ ಯುವಕರು ಧಾವಿಸಿ ಪ್ರಯಾಣಿಕರನ್ನು ಕಾರಿನಿಂದ ರಕ್ಷಿಸಿದ್ದಾರೆ.