ಚಿಕನ್‌ಫಾಕ್ಸ್: ಬಾಲಕ ಮೃತ್ಯು
ಕಾಸರಗೋಡು: ಚಿಕನ್‌ಫಾಕ್ಸ್ (ಸಿಡುಬು ರೋಗ) ತಗಲಿ ಚಿಕಿತ್ಸೆಯಲ್ಲಿದ್ದ ಬಾಲಕ ಸಾವನ್ನಪ್ಪಿದ್ದಾನೆ. ತೃಕ್ಕರಿಪುರ ಕೊಯಂಕರದ ಬಿ. ಮಹೇಂದ್ರನ್- ಎಂ. ಸೆಲ್ವಿ ದಂಪತಿ ಪುತ್ರ ತೃಕ್ಕರಿಪುರ ಸೈಂಟ್ ಪೋಲ್ಸ್ ಎಯುಪಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಮಕುಲ್ (೯) ಸಾವನ್ನಪ್ಪಿದ ಬಾಲಕ. ಈತನ ಹೆತ್ತವರು ಮೂಲತಃ ತಮಿಳುನಾಡು ನಿವಾಸಿಗಳಾಗಿದ್ದಾರೆ. ಮೃತನು ಹೆತ್ತವರ ಹೊರತಾಗಿ ಸಹೋದರ ಕಾಶ್ವಿನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ