ಚಿಗುರುಪಾದೆಯಲ್ಲಿ ಸಹಕಾರಿ ವಾರಾಚರಣೆ
ಮೀಂಜ: 71 ನೇ ಅಖಿಲ ಭಾರತ ಸಹಕಾರಿ ವಾರಾಚಾರಣೆಯಂಗವಾಗಿ ಮೀಂಜ- ಮಂಗಲ್ಪಾಡಿ ಪಬ್ಲಿಕ್ ವೆಲ್ಫೇರ್ ಕೋ ಓಪರೇಟಿವ್ ಸೊಸೈಟಿ ಯ ನೇತೃತ್ವದಲ್ಲಿ ಚಿಗುರುಪಾದೆ ಪೇಟೆಯಲ್ಲಿ ಉಪ್ಪಳ ಅಗ್ನಿ ಶಾಮಕ ದಳದವರಿಂದ ವಿವಿಧ ಅಪಘಾತ ಗಳಿಂದ ಯಾವ ರೀತಿಯಲ್ಲಿ ಸ್ವ ರಕ್ಷಣೆ ಪಡೆಯಬಹುದು ಎಂಬ ಬಗ್ಗೆ ಮಾಹಿತಿ ಶಿಬಿರ ನಡೆಸಲಾಯಿತು. ಪ್ರಕೃತಿ ವಿಕೋಪ, ಬೆಂಕಿ ಅನಾಹುತ, ಹೃದಯಾಘಾತ ಮೊದಲಾದ ವಿಷಯಗಳ ಬಗ್ಗೆ ಅಗ್ನಿ ಶಾಮಾಕ ದಳದ ಅಧಿಕಾರಿಗಳು ಮಾಹಿತಿ ನೀಡಿದರು.
ಅಧ್ಯಕ್ಷ ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಸೊಸೈಟಿ ಸೆಕ್ರೆಟರಿ ಉದಯ್ ಸಿ. ಎಚ್ ಸ್ವಾಗತಿಸಿದರು. ನಿರ್ದೇಶಕ ಲೋಕೇಶ ಚಿನಾಲ, ರಾಮಚಂದ್ರ. ಟಿ, ವಿಶ್ವನಾಥ. ಕೆ, ಸರಸ್ವತಿ ಎಲಿಯಾಣ, ಜನಾರ್ಧನ ಪೂಜಾರಿ, ನಿವೇದಿತ ಎಂ ಶೆಟ್ಟಿ ಭಾಗವಹಿಸಿದರು.