ಚಿನ್ಮಯ ವಿದ್ಯಾಲಯದಲ್ಲಿ ‘ಗೋಟಿಪುವ’ ಕಲಾ ಪ್ರದರ್ಶನ
ಕಾಸರಗೋಡು : ಭಾರತೀಯ ಸಂಸ್ಕೃತಿ ಮತ್ತು ಕಲೆಯನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಒಡಿಶಾ ಶೈಲಿಯ ‘ಗೋಟಿಪುವ’ ಎಂಬ ಶಾಸ್ತ್ರೀಯ ನೃತ್ಯ ಕಲಾ ರೂಪ ಪ್ರದರ್ಶನಗೊಂಡಿತು. ಗಂಡಸರು ಸ್ತ್ರೀ ವೇಷಧಾರಿಯಾಗಿ ಪ್ರದರ್ಶಿಸುವುದು ಇದರ ವಿಶೇಷತೆಯಾಗಿದೆ. 16ನೇ ಶತಮಾನದಿಂದಲೇ ಒಡಿಶಾದಲ್ಲಿ ಪ್ರಚಲಿತವಾಗಿರುವ ಈ ಕಲಾ ಪ್ರದರ್ಶನವನ್ನು ಸ್ಪಿಕ್ ಮೆಕೆಯ ಸಹಯೋಗದಲ್ಲಿ ಆಯೋಜಿ ಸಲಾಯಿತು. ನಕ್ಷತ್ರ ಗುರುಕುಲ ಭುವನೇಶ್ವರ ಇಲ್ಲಿಯ ಕಲಾಗಾರರು ಶಾಸ್ತ್ರೀಯ ಕಲಾ ನೃತ್ಯ ಪ್ರದರ್ಶನವನ್ನು ನಡೆಸಿಕೊಟ್ಟರು. ಉಣ್ಣಿ ವಾರಿಯರ್ ನೇತೃತ್ವ ವಹಿಸಿದರು. ಕಾರ್ಯಕ್ರಮದಲ್ಲಿ ಕೇರಳ ಚಿನ್ಮಯ ಮಿಷನ್‌ನ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ, ಬ್ರಹ್ಮಚಾರಿಣಿ ದಿಶಾ ಚೈತನ್ಯ, ಪ್ರಾಂಶುಪಾಲ ಸುನಿಲ್ ಕುಮಾರ್ ಕೆ.ಸಿ, ಉಪ ಪ್ರಾಂಶುಪಾಲ ಪ್ರಶಾಂತ ಬಿ, ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ಎಸ್. ಆರ್, ಚಿನ್ಮಯ ಮಿಷನ್‌ನ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶ್ರೀಯ ಅಡಿಗ ನಿರೂಪಿಸಿದರು.