ಚಿನ್ಮಯ ವಿದ್ಯಾಲಯದಲ್ಲಿ ಶಿಶು ದಿನಾಚರಣೆ
ಕಾಸರಗೋಡು: ಚಿನ್ಮಯ ವಿದ್ಯಾ ಲಯದಲ್ಲಿ ವಿವಿಧ ಕಾರ್ಯ ಕ್ರಮ ಗಳೊಂದಿಗೆ ಶಿಶು ದಿನಾಚರಣೆ ನಡೆಸಲಾಯಿತು. ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಅನಿಲ್ ಕುಮಾರ್ ಉದ್ಘಾಟಿಸಿದರು. ಬ್ರಹ್ಮ ಚಾರಿಣಿ ರೋಜಿಶ ಮಾತನಾಡಿ ದರು. ಚಿನ್ಮಯ ಪ್ರಾಂಶುಪಾಲ ಕೆ. ಸುನಿಲ್ ಕುಮಾರ್, ಸಹಾಯಕ ಪ್ರಾಂಶುಪಾಲ ಪ್ರಶಾಂತ್ ಬಿ. ಶುಭ ಕೋರಿದರು. ಬಳಿಕ ಚಿನ್ಮಯ ಫೆಸ್ಟ್ನಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಧ್ಯಾಪಕರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮುಖ್ಯೋ ಪಾಧ್ಯಾಯಿನಿ ಪೂರ್ಣಿಮಾ ಎಸ್.ಆರ್, ಸಿಂಧೂ ಶಶೀಂದ್ರನ್, ಅಧ್ಯಾಪಕರು, ನೌಕರರು, ವಿದ್ಯಾರ್ಥಿಗಳು ಭಾಗವಹಿಸಿದರು. ಅಧ್ಯಾಪಿಕೆ ಮಂಜೂಷ ಸ್ವಾಗತಿಸಿ, ದಿವ್ಯನಾಥ್ ವಂದಿಸಿದರು.