ಚುನಾವಣಾ ಕೆಲಸಕ್ಕೆ ವೇತನ ಲಭಿಸಿಲ್ಲ: ವೀಡಿಯೋಗ್ರಾಫರ್‌ರಿಂದ ನಾಳೆ ಧರಣಿ ಮುಷ್ಕರ
ಕಾಸರಗೋಡು: ಕಳೆದ ಲೋಕ ಸಭಾ ಚುನಾವಣೆಯಲ್ಲಿ ಸರಕಾರದ ಪರವಾಗಿ ಮತಗಟ್ಟೆಗಳು, ಮತ್ತಿತರೆಡೆ ಗಳಲ್ಲಿ ವೀಡಿಯೋ ಚಿತ್ರೀಕರಣ ನಡೆಸಿದ ವೀಡಿಯೋ ಗ್ರಾಫರ್‌ಗಳಿಗೆ ವೇತನ ಈತನಕ ಲಭಿಸಿಲ್ಲ. ಅಂತಹ ನೀತಿಯನ್ನು ಪ್ರತಿಭಟಿಸಿ ಆಲ್ ಕೇರಳ ಫೊಟೋ ಗ್ರಾಫರ್ಸ್ ಅಸೋಸಿಯೇಷನ್ (ಎಕೆಪಿಎ) ಇದರ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ನಾಳೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಧರಣಿ ಮುಷ್ಕರ ಹೂಡಲು ತೀರ್ಮಾನಿ ಸಲಾಗಿದೆ ಎಂದು ಪದಾಧಿ ಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವೀಡಿಯೋ ಚಿತ್ರೀಕರಣ ನಡೆಸಿದ ವೀಡಿಯೋಗ್ರಾಫರ್‌ಗಳಿಗೆ ೪೫ ಲಕ್ಷ ರೂ. ಲಭಿಸಲು ಬಾಕಿ ಇದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ. ಟ್ರೆಷರಿ ನಿಯಂತ್ರಣದ ಹೆಸರಲ್ಲಿ ವೇತನ ವಿತರಿಸಲಾಗಿಲ್ಲ. ವೇತನ ವಿತರಣೆ ವಿಳಂಬಗೊಳ್ಳುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಈ ವೇತನ ನೀಡುವಂತೆ ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತಾದರೂ ಅದರಿಂದ ಫಲವುಂಟಾಗಿಲ್ಲವೆಂದೂ ಅವರು ಹೇಳಿದ್ದಾರೆ.
ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ಸಿ. ಅಬ್ರಹಾಂ, ಜಿಲ್ಲಾ ಕಾರ್ಯದರ್ಶಿ ಟಿ.ವಿ. ಸುಗುಣನ್ ಇರಿಯ, ಕೋಶಾಕಾರಿ ಪಿ.ಟಿ. ಸುನಿಲ್ ಕುಮಾರ್, ಪಿ.ಎ. ಶರೀಫ್ ಎಂ.ಕೆ, ಪ್ರಜಿತ್, ವಿ.ಎನ್. ರಾಜೇಂದ್ರನ್, ಪಿ.ಕೆ. ಅಶೋಕ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾಹಿತಿ ನೀಡಿದ್ದಾರೆ.