ಚುನಾವಣಾ ವೆಚ್ಚ ಮೂರನೇಹಂತ: ತಾರಾ ಪ್ರಚಾರಕರಿಗೆ ಎಡರಂಗದಿಂದ ಅತ್ಯಂತ ಹೆಚ್ಚು ವೆಚ್ಚ
ಕಾಸರಗೋಡು: ಲೋಕಸಭಾ ಚುನಾವಣೆಯ ಮೂರನೇ ಹಂತದಲ್ಲಿ ಪ್ರಚಾರ ಚಟುವಟಿಕೆಗಳಿಗೆ ಹೆಚ್ಚು ಹಣ ವೆಚ್ಚ ಮಾಡಿರುವುದರಲ್ಲಿ ಎಡರಂಗದ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ ಪ್ರಥಮ ಸ್ಥಾನದಲ್ಲಿದ್ದಾರೆ. ಮಂಡಲಕ್ಕೆ ತಾರ ಪ್ರಚಾರಕರನ್ನು ತಲುಪಿಸಲು ಹೆಚ್ಚು ಹಣ ವೆಚ್ಚ ಮಾಡಲಾಗಿದೆ. 7.56 ಲಕ್ಷ ಶ್ಯಾಡೋ ನಿರೀಕ್ಷಣಾ ರಿಜಿಸ್ಟರ್ನಲ್ಲಿ ದಾಖಲಾಗಿದ್ದು, ಆದರೆ ಇದು ಹೊಂದಾಣಿಕೆಯಾಗುತ್ತಿಲ್ಲ. ಈ ಬಗ್ಗೆ ಅಭ್ಯರ್ಥಿಗಳಲ್ಲಿ ವಿವರಣೆ ಕೇಳಲು ನೋಟೀಸು ಕಳುಹಿಸಲಾಗಿದೆ. ಮೂರನೇ ಹಂತದ ಚುನಾವಣೆ ಶ್ಯಾಡೋ ನಿರೀಕ್ಷಣೆ ನೋಂದಾವಣೆ ಪ್ರಕಾರ ಎಡರಂಗದ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ 53.11 ಲಕ್ಷ ರೂ. ವೆಚ್ಚ ಮಾಡಿದ್ದಾರೆ.
ಐಕ್ಯರಂಗದ ಅಭ್ಯರ್ಥಿ ರಾಜ್ಮೋಹನ್ ಉಣ್ಣಿತ್ತಾನ್ 22.32 ಲಕ್ಷ, ಎನ್ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ 26.75 ಲಕ್ಷ ರೂ. ವೆಚ್ಚ ಮಾಡಿರುವುದಾಗಿ ಲೆಕ್ಕಗಳಿಂದ ತಿಳಿದು ಬರುತ್ತದೆ. ಕಲೆದ 22ರವರೆಗಿರುವ ಲೆಕ್ಕವಾಗಿದೆ ಇದು. ಮೂರನೇ ಹಂತದಲ್ಲಿ ಎಡರಂಗದ ಅಭ್ಯರ್ಥಿ ಎಂ.ವಿ. ಬಾಲಕೃಷ್ಣನ್ 43.44 ಲಕ್ಷ ರೂ, ರಾಜ್ಮೋಹನ್ ಉಣ್ಣಿತ್ತಾನ್ 15.75 ಲಕ್ಷ ರೂ, ಎಂ.ಎಲ್. ಅಶ್ವಿನಿ 10.45 ಲಕ್ಷ ರೂ. ಮಾತ್ರವೇ ಲೆಕ್ಕದಲ್ಲಿ ತೋರಿಸಿರುವುದು.