ಚುನಾವಣೆಗೆ ಕೇರಳ ಸಜ್ಜು: ನಕಲಿ ಮತದಾನಕ್ಕೆ ಯತ್ನಿಸಿದಲ್ಲಿ ಕಠಿಣ ಕ್ರಮ-ಚುನಾವಣಾ ಆಯೋಗ
ತಿರುವನಂತಪುರ: ಲೋಕಸಭಾ ಚುನಾಣೆಗೆ ಕೇರಳ ಪೂರ್ಣ ಸಜ್ಜಾಗಿದೆಯೆಂದೂ ನಕಲಿ ಮತದಾನಕ್ಕೆ ನಡೆಸಲು ಯತ್ನಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ರಾಜ್ಯ ಚುನಾವಣಾಧಿಕಾರಿ ಸಂಜಯ್ ಕೌಲ್ ಸ್ಪಷ್ಟಪಡಿಸಿದ್ದಾರೆ.
ವಯೋಜನರು ಮತ್ತು ಶಯ್ಯಾ ಸ್ಥಿತಿಯಲ್ಲಿರುವವರಿಗೆ ಅವರ ಮನೆಯಲ್ಲೇ ಮತಚಲಾಯಿಸಲು ಸೌಕರ್ಯ ಏರ್ಪಡಿಸಿದ ವೇಳೆ ಹಲವೆಡೆಗಳಲ್ಲಿ ನಕಲಿ ಮತ ಚಲಾಯಿಸಲಾಗಿದೆಯೆಂಬ ದೂರಿನ ಬಗ್ಗೆ ತಕ್ಷಣದಿಂದ ಕ್ರಮ ಕೈಗೊಳ್ಳಲಾಗಿದೆ ಮಾತ್ರವಲ್ಲ ಒಂದು ಮುನ್ನೆಚ್ಚರಿಕೆ ಕೂಡಾ ಆಗಿದೆ ಎಂದು ಎಲ್ಲರೂ ಮನಗಾಣಬೇಕಾಗಿದೆ.
ಶಾಂತಿಯುತ ಹಾಗೂ ಪಾರದರ್ಶಕ ರೀತಿಯಲ್ಲಿ ಮತದಾನ ನಡೆಯುವಂತೆ ಮಾಡುವ ಅಗತ್ಯದ ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ನಡೆಸಲಾಗಿದೆ. ಶಾಂತ ಹಾಗೂ ನ್ಯಾಯಯುತವಾಗಿ ಮತದಾನ ಖಾತರಿಪಡಿಸಲಾಗುವುದೆಂದೂ ರಾಜ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ. ಚುನಾವಣಾ ಕಾನೂನು ಉಲ್ಲಂಘನೆ ಕುರಿತಾದ ದೂರುಗಳ ಬಗ್ಗೆ ತ್ವರಿತ ತೀರ್ಪು ಕೈಗೊಳ್ಳಲಾಗುವುದು.
ಅಣಕು ಮತದಾನ (ಮೋಕ್ ಪೋಲಿಂಗ್) ನಡೆಸಿದ ವೇಳೆ ಎದ್ದ ದೂರುಗಳಲ್ಲಿ ಯಾವುದೇ ರೀತಿಯ ಹುರುಳುಗಳಿಲ್ಲ. ಶಬ್ಧ ಪ್ರಚಾರ ವೇಳೆಯಲ್ಲ್ಲಿ ಸೋಶಿಯಲ್ ಮೀಡಿಯಾ ಮಾಧ್ಯಮಗಳ ಮೇಲೆ ತೀವ್ರ ನಿಗಾ ಇರಿಸಲಾಗುವುದೆಂದೂ ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.
ಕೇರಳ ಸೇರಿದಂತೆ ೧೩ ರಾಜ್ಯಗಳ ೮೮ ಲೋಕಸಭಾ ಕ್ಷೇತ್ರಗಳಿಗೆ ಎಪ್ರಿಲ್ ೨೬ರಂದು ಮತದಾನ ನಡೆಯಲಿದೆ. ಇದು ಲೋಕಸಭಾ ಚುನಾವಣಾ ದ್ವಿತೀಯ ಹಂತದ ಮತದಾನವಾಗಿದೆ.
ಉಮೇದ್ವಾರರ ಮತ್ತು ಅವರು ಪ್ರತಿನಿಧೀಕರಿಸುವ ರಾಜಕೀಯ ಪಕ್ಷಗಳು ಅಥವಾ ಒಕ್ಕೂಟಗಳ ಚುನಾವಣಾ ಪ್ರಚಾರಕ್ಕೆ ನಾಳೆ ತೆರೆಬೀಳಲಿದೆ.