ಚುನಾವಣೆ: ಸಾರ್ವಜನಿಕ, ಖಾಸಗಿ ಸ್ಥಳಗಳಲ್ಲಿ ಅನಧಿಕೃತವಾಗಿ ಸ್ಥಾಪಿಸಲಾಗಿದ್ದ 8391 ಪ್ರಚಾರ ಸಾಮಗ್ರಿ ತೆರವು
ಕಾಸರಗೋಡು: ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜ್ಯಾರಿಗೊಳಿಸುವುದಕ್ಕಾಗಿ ಜಿಲ್ಲೆ ಯಲ್ಲಿ ರೂಪೀಕರಿಸಲಾಗಿರುವ ಆಂಟಿ ಡಿಪೋರ್ಸ್ ಮೆಂಟ್ ಸ್ಕ್ವಾಡ್ ನ ನೇತೃತ್ವದಲ್ಲಿ ಇದುವರೆಗೆ ಸಾರ್ವ ಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಅನಧಿಕೃತವಾಗಿ ಸ್ಥಾಪಿಸಿದ್ದ ೮೩೯೧ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿ ಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿರಿಸಲಾಗಿದ್ದ ೮೨೭೭ ಪ್ರಚಾರ ಸಾಮಗ್ರಿಗಳನ್ನು ತೆಗೆದುಹಾಕಲಾಗಿದ್ದು, ೭ ಭಿತ್ತಿ ಬರಹಗಳು, ೬೨೨ ಬ್ಯಾನರ್ಗಳು, ೬೪೭೧ ಪೋಸ್ಟರ್ ಗಳು, ೯೫೧ ಧ್ವಜ ಮತ್ತು ಕಂಬ ಇದರಲ್ಲಿ ಒಳಗೊಂಡಿದೆ. ಇದು ಮಾತ್ರವಲ್ಲದೆ ಮಾಲಕರ ಅನುಮತಿಯಿಲ್ಲದೆ ಖಾಸಗಿ ಸ್ಥಳದಲ್ಲಿರಿಸಲಾಗಿದ್ದ ಪ್ರಚಾರ ಸಾಮಗ್ರಿಗಳನ್ನು ದೂರಿನ ಆಧಾರದ ಮೇಲೆ ತೆರವುಗೊಳಿಸಲಾಗುತ್ತಿದ್ದು, ಈ ರೀತಿಯಾಗಿ ೯೨ ಪೋಸ್ಟರ್ಗಳು, ೧೧ ಫ್ಲೆಕ್ಸ್ಗಳು, ೧೧ ಧ್ವಜಸ್ತಂಭಗಳು ಸೇರಿದಂತೆ ೧೧೪ ಪ್ರಚಾರ ಸಾಮಗ್ರಿ ಗಳನ್ನು ಸ್ಕ್ವಾಡ್ ತೆರವುಗೊಳಿಸಿದೆ.