ಚೆನ್ನಂಗೋಡಿನಲ್ಲಿ ‘ಬಣ್ಣದಜ್ಜನ ಸ್ಮೃತಿಯಾನ’ 19ರಂದು

ಮುಳ್ಳೇರಿಯ: ಏಳು ದಶಕಗಳ ಕಾಲ ತೆಂಕುತಿಟ್ಟಿನ ಯಕ್ಷಗಾನ ರಂಗದಲ್ಲಿ ತನ್ನ ಬಣ್ಣದ ವೇಷಗಳಿಂದ ಮಿಂಚಿದ ಬಣ್ಣದ ಮಹಾಲಿಂಗರ ಹೆಸರಿನಲ್ಲಿ ಸ್ಥಾಪಿಸಲ್ಪಟ್ಟ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ಪುತ್ತೂರು ಸಂಸ್ಥೆಯಿAದ ‘ಬಣ್ಣದಜ್ಜನ ಸ್ಮೃತಿ ಯಾನ’ ಬಣ್ಣದ ಮಹಾಲಿಂಗರವರ ನೆನಪಿನಲ್ಲೊಂದು ಯಕ್ಷಪಯಣ ಎಂಬ ಸರಣಿ ಕಾರ್ಯಕ್ರಮ ಈ ತಿಂಗಳ 19ರಂದು ಅಪರಾಹ್ನ 2.30ಕ್ಕೆ ಬಣ್ಣದ ಮಹಾಲಿಂಗರ ಹುಟ್ಟೂರು ಕಾರಡ್ಕ ಸಮೀಪದ ಚೆನ್ನಂಗೋಡಿನ ಯಕ್ಷಗಾನ ಕಲಾವಿದ ದಿ| ಶಂಕರ ಪಾಟಾಳಿಯವರ ಮನೆಯಲ್ಲಿ ನೆರವೇರಲಿದೆ. ತೆಂಕುತಿಟ್ಟು ಯಕ್ಷರಂಗದ ಮೇರು ಕಲಾವಿದ ಬಣ್ಣದ ಮಹಾಲಿಂಗರ ಸಾಧನೆಯನ್ನು ಮೆಲುಕುಹಾಕುವುದರೊಂದಿಗೆ ನವತಲೆಮಾರಿಗೆ ದಾಟಿಸುವ ಮಹತ್ತರವಾದ ಆಶಯವನ್ನಿರಿಸಿಕೊಂಡು ಪ್ರಾರಂಭವಾಗುವ ಈ ಕಾರ್ಯಕ್ರಮವನ್ನು ಸೀತಾ ಚೆನ್ನಂಗೋಡು ಉದ್ಘಾಟಿಸುವರು. ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಮಾಸ್ತರ್ ಪಂಜತ್ತೊಟ್ಟಿ ಅಧ್ಯಕ್ಷತೆ ವಹಿಸುವರು. ನಿವೃತ್ತ ಮುಖ್ಯೋಪಾಧ್ಯಾಯ ಯಕ್ಷಗಾನ ಪೋಷಕ ಸುಧೀರ್ ಕುಮಾರ್ ರೈ ಮುಳ್ಳೇರಿಯ ಬಣ್ಣದ ಮಹಾಲಿಂಗರ ಸಂಸ್ಮರಣೆ ನಡೆಸುವರು.
ಹಿರಿಯ ಯಕ್ಷಗಾನ ಕಲಾವಿದ ಎ. ಜಿ. ನಾಯರ್‌ರಿಗೆ ಬಣ್ಣದ ಮಹಾಲಿಂಗ ಯಕ್ಷಸ್ಮೃತಿ ಪುರಸ್ಕಾರ ಪ್ರದಾನ ಮಾಡಲಾಗುವುದು. ಹಿರಿಯ ಯಕ್ಷಗಾನ ಕಲಾವಿದ ಜಯರಾಮ ಪಾಟಾಳಿ ಪಡುಮಲೆ ಅಭಿನಂದನ ಭಾಷಣ ಮಾಡÀÄವರು. ನಿವೃತ್ತ ಮುಖ್ಯೋಪಾಧ್ಯಾಯ ಬಾಲಕೃಷ್ಣ ಮಾಸ್ಟರ್ ಪುಂಡಿಕಾಯಿ ಮುಖ್ಯ ಅತಿಥಿಯÁಗಿರುವರು. ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಸಂಚಾಲಕ ತಿಮ್ಮಪ್ಪ ಪಟ್ಟೆ, ಬಣ್ಣದ ಮಹಾಲಿಂಗ ಸ್ಮೃತಿಯಾನದ ಸಂಚಾಲಕ ಸುಬ್ಬಪ್ಪ ಪಟ್ಟೆ ಶುಭಾಶಂಸನೆ ಮಾಡÀÄವರು. ಎಂದು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಯ ನಾರಾಯಣ ದೇಲಂಪಾಡಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page