ಚೆರ್ಕಳ-ಚಟ್ಟಂಚಾಲು ಹೆದ್ದಾರಿಯಲ್ಲಿ ಮಣ್ಣು ಕುಸಿತ
ಕಾಸರಗೋಡು: ನಿನ್ನೆ ಸುರಿದ ಧಾರಾಕಾರ ಮಳೆಗೆ ಚೆರ್ಕಳ-ಚಟ್ಟಂಚಾಲು ರಾಷ್ಟ್ರೀಯ ಹೆದ್ದಾರಿಯ ಮೂರು ಕಡೆಗಳಲ್ಲಿ ಮಣ್ಣು ಕುಸಿದುಬಿದ್ದಿದೆ. ಸ್ಟಾರ್ ನಗರ ಸಮೀಪದಲ್ಲಿ ರಸ್ತೆ ಬದಿಯ ಮಣ್ಣು ಕುಸಿದುಬಿದ್ದಿರುತ್ತದೆ. ಈ ಭಾಗದಲ್ಲಾಗಿ ನೀರು ಉಕ್ಕಿ ಹರಿಯುತ್ತಿತ್ತು. ಇದುವೇ ಮಣ್ಣು ಕುಸಿಯಲು ಕಾರಣವೆಂದು ಅಂದಾಜಿಸಲಾಗಿದೆ. ವಿಷಯ ತಿಳಿದು ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ವಾಹನಗಳು ನಿಧಾನವಾಗಿ ಸಂಚರಿಸಲಿರುವ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ತೆಕ್ಕಿಲ್ ಅಂಬಟ್ಟಡ್ಕ ಸಮೀಪದಲ್ಲಿ ಎರಡು ಕಡೆಗಳಲ್ಲಿ ಮಣ್ಣು ಕುಸಿದು ರಸ್ತೆಗೆ ಬಿದ್ದಿದೆ. ಮಣ್ಣು ತೆಗೆದ ಭಾಗದಲ್ಲಿ ಈ ಹಿಂದೆ ಸಿಮೆಂಟು ಅಳವಡಿಸಲಾಗಿತ್ತು. ಈ ಭಾಗದಲ್ಲಿ ಇದೀಗ ಮಣ್ಣು ಕುಸಿದಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ತಾತ್ಕಾಲಿಕ ವಾಗಿ ನಿರ್ಮಿಸಿದ ರಸ್ತೆಗೆ ಮಣ್ಣು ತೆಗೆದ ಭಾಗದಲ್ಲಿ ಇದೀಗ ಕುಸಿತವುಂ ಟಾಗಿದೆ.
ಜೆಸಿಬಿ ಹಾಗೂ ಕಾರ್ಮಿಕ ರನ್ನು ಸೇರಿಸಿ ಮಣ್ಣನ್ನು ತೆರವುಗೊಳಿ ಸಲಾಗುತ್ತಿದೆ. ಇದೇ ಸ್ಥಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಹಿಂದೆ ಬಿರುಕು ಕಂಡುಬಂದಿತ್ತು. ಇಲ್ಲಿಯೂ ವಾಹನಗಳ ಸಂಚಾರಕ್ಕೆ ವ್ಯವಸ್ಥೆ ಏರ್ಪಡಿಸಲಾಗಿದೆ. ಮಣ್ಣು ಕುಸಿತ ಮುಂದುವರಿದಲ್ಲಿ ಚೆರ್ಕಳ-ಚಟ್ಟಂ ಚಾಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮೊಟಕುಗೊಳ್ಳಲಿದೆಯೇ ಎಂಬ ಆತಂಕ ಹುಟ್ಟಿಕೊಂಡಿದೆ.