ಚೇವಾರು ಶಾಲೆಯಲ್ಲಿ ಎನ್‌ಎಸ್‌ಎಸ್ ಶಿಬಿರ
ಧರ್ಮತ್ತಡ್ಕ: ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹೈಯರ್ ಸೆಕೆಂಡರಿ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆಯ ಸಪ್ತ ದಿನ ಶಿಬಿರ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಚೇವಾರಿನಲ್ಲಿ ಜರಗಿತು. ಧರ್ಮತ್ತಡ್ಕ ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ಕುಡಾಲು ಅಧ್ಯಕ್ಷತೆ ವಹಿಸಿದರು. ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ ಉದ್ಘಾಟಿಸಿದರು. ಚೇವಾರು ಶಾಲೆಯ ವ್ಯವಸ್ಥಾಪಕ ಶ್ರೀಧರ್ ಭಟ್ ಧ್ವಜಾರೋಹಣ ಗೈದರು. ಧರ್ಮತ್ತಡ್ಕ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಶಂಕರನಾರಾಯಣ ಭಟ್, ಪೈವಳಿಕೆ ಪಂಚಾಯತ್ ಸದಸ್ಯೆ ರಾಜೀವಿ, ಚೇವಾರು ಶಾಲೆಯ ಮುಖ್ಯೋಪಾಧ್ಯಾಯ ಶ್ಯಾಮ್ ಭಟ್ ಚೇವಾರು, ಧರ್ಮತ್ತಡ್ಕ ಶಾಲಾ ಮಾತೃ ಮಂಡಳಿ ಅಧ್ಯಕ್ಷೆ ಪುಷ್ಪಾ ಕಮಲಾಕ್ಷ, ಚೇವಾರು ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಗದೀಶ್ ಶುಭ ಹಾರೈಸಿದರು.
ಧರ್ಮತ್ತಡ್ಕ ಶಾಲೆಯ ಪ್ರಾಂಶು ಪಾಲ ರಾಮಚಂದ್ರ ಭಟ್ ಸ್ವಾಗತಿಸಿ, ಹಿರಿಯ ಶಿಕ್ಷಕ ಸತೀಶ್ ಕುಮಾರ್ ಶೆಟ್ಟಿ ನಿರೂಪಿಸಿ, ರಾಷ್ಟ್ರೀಯ ಸೇವಾ ಯೋಜನೆಯ ಧರ್ಮತ್ತಡ್ಕ ಯೋಜನಾಧಿಕಾರಿ ಜಗದೀಶನ್ ವಂದಿಸಿದರು. ಶಿಬಿರದಲ್ಲಿ ಸ್ವಚ್ಛತಾ ಕಾರ್ಯಕ್ರಮ, ಮನೆ-ಮನೆ ಸಂಪರ್ಕ, ಮಾಲಿನ್ಯ ಮುಕ್ತ ನಾಳೆಗಾಗಿ ಯುವ ಕೇರಳ ಎಂಬ ಸಂದೇಶವನ್ನು ಸಾರುವ ಬೀದಿ ನಾಟಕ, ಮಾದಕದ್ರವ್ಯದ ನಿರ್ಮೂಲನೆಗಾಗಿ ದೀಪ ಪ್ರಜ್ವಲನೆ, ಸಂಪನ್ಮೂಲ ವ್ಯಕ್ತಿ ಗಳಿಂದ ವಿವಿಧ ತರಗತಿಗಳು ಹಾಗೂ ಶಿಬಿರದ ಅಂತಿಮ ದಿನ ಬಾಯಾರು ಪದವಿನಲ್ಲಿ ‘ಸ್ವಚ್ಛತೆಯೊಂದಿಗೆ ಸ್ನೇಹ ರಾಮಂ ಪದ್ಧತಿ’ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.