ಜನಪ್ರಿಯ ವೈದ್ಯ ಡಾ| ಬಿ. ನಾರಾಯಣ ನಾಯ್ಕ್‌ರಿಗೆ  ಐ.ಎಂ.ಎ ರಾಜ್ಯ ಘಟಕದ ಪ್ರಶಸ್ತಿ

ಕಾಸರಗೋಡು: ಕಾಸರ ಗೋಡಿನ ವೈದ್ಯಕೀಯ ಸಂಘಟನಾ ರಂಗದಲ್ಲಿ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಜನಪ್ರಿಯ ವೈದ್ಯ, ಐ.ಎಂ.ಎ ಕಾಸರಗೋಡು ಜಿಲ್ಲಾ ಸಂಚಾಲಕ ಡಾ| ಬಿ. ನಾರಾಯಣ ನಾಯ್ಕ್‌ರನ್ನು ಗುರುತಿಸಿ ಐ.ಎಂ.ಎ ಕೇರಳ ರಾಜ್ಯ ಘಟಕದ ರಾಜ್ಯ ಪ್ರಶಸ್ತಿ ಘೋಷಿಸಿದೆ.

ಐ.ಎಂ.ಎ ಕೇರಳ ರಾಜ್ಯ ಘಟಕದ ಅತ್ಯುತ್ತಮ ಔಟ್ ಸ್ಟೇಂಡಿಂಗ್ ಲೀಡರ್ ಶಿಪ್ ಪ್ರಶಸ್ತಿ ಇದಾಗಿದ್ದು, ನವಂಬರ್ 9ರಂದು ತೃಶೂರಿನ ಐ.ಎಂ.ಎ ಕಾನ್ಫರೆನ್ಸ್ ಭವನದಲ್ಲಿ ನಡೆಯುವ ಐ.ಎಂ.ಎ ರಾಜ್ಯ ಸಮ್ಮೇಳನದಲ್ಲಿ  ಪ್ರಶಸ್ತಿ ಪ್ರದಾನ ನಡೆಯಲಿದೆ.

ಎಣ್ಮಕಜೆ ಪಂಚಾಯತ್‌ನ ಏಳ್ಕಾನ ಬಾಳೆಗುಳಿ ದಿ| ರಾಮ ನಾಯ್ಕ್-ದಿ| ಲಕ್ಷ್ಮಿ ಅವರ ಪುತ್ರನಾದ ನಾರಾಯಣ ನಾಯ್ಕರು 1993ರಲ್ಲಿ  ಕೇರಳ ಸರಕಾರಿ ಆರೋಗ್ಯ ಇಲಾಖೆಗೆ ಸೇರ್ಪಡೆ ಗೊಂಡರು. ಕಾಸರಗೋಡಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದುಡಿದು, ಪದೋನ್ನತಿ ಯೊಂದಿಗೆ 2008ರಲ್ಲಿ ಕಾಸರಗೋಡು ಸರಕಾರಿ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ಮುಖ್ಯಸ್ಥರಾಗಿ ನೇಮಕಗೊಂಡು 2022ರ ಡಿ 31ರಂದು ಸೀನಿಯರ್ ಪೀಡಿಯಾ ಟ್ರಿಕ್ ಕನ್ಸಲ್ಟಂಟ್ ಸೇವೆಯೊಂದಿಗೆ ನಿವೃತ್ತರಾದರು.

ಕಾಸರಗೋಡಿನಲ್ಲಿ ಮಕ್ಕಳ ತಜ್ಞರಾಗಿ ತನ್ನ ಅಧಿಕ ಸಮಯವನ್ನೂ ಸಂಘಟನೆ, ಸಮಾಜಕ್ಕೆ ಮೀಸಲಿರಿಸಿ ಚಟುವಟಿಕೆಯಲ್ಲೇ ಮಗ್ನರಾದ ಇವರು ಕಾಸರಗೋಡು ಐ.ಎಂ.ಎ ಘಟಕವನ್ನು ಬಲಿಷ್ಠಗೊಳಿ ಸಿದವರು. ವೈದ್ಯಕೀಯ ಸಂಬಂಧವಾದ ಹಲವು ಸಂಘಟನೆಗಳ ಸಾರಥಿಯಾದ ಇವರು ಪ್ರಸ್ತುತ ಐ.ಎಂ.ಎ ಜಿಲ್ಲಾ ಸಂಚಾಲಕ, ರೋಟರಿ ಸಂಸ್ಥೆಗಳ ಸಾರಥಿ, ಅನೇಕ ತರಬೇತಿ, ಉಪನ್ಯಾಸಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ, ಸಂಘಟನಾ ರಂಗದಲ್ಲಿ ದಣಿವರಿಯದ ದುಡಿಮೆಯ ಸಾಧಕರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page