ಜನರಲ್ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರಕ್ಕೆ ಸುಲ್ತಾನ್ ಗೋಲ್ಡ್‌ನಿಂದ ಟಿ.ವಿ ಹಸ್ತಾಂತರ
ಕಾಸರಗೋಡು: ಜನರಲ್ ಆಸ್ಪತ್ರೆಯ ಡಯಾಲಿಸಿಸ್ ಸೆಂಟರ್‌ಗೆ ಸುಲ್ತಾನ್ ಡೈಮಂಡ್ಸ್ ಆಂಡ್ ಗೋಲ್ಡ್ ವತಿಯಿಂದ ಟಿ.ವಿ ನೀಡಲಾಯಿತು. ಜನರಲ್ ಆಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ೨೭ ಮಂದಿ ಡಯಾಲಿಸಿಸ್ ನಡೆಸುತ್ತಾರೆ. ರಾತ್ರಿ ಕಾಲದಲ್ಲೂ ಡಯಾಲಿಸಿಸ್ ನಡೆಸಲಿರುವ ಸಿದ್ಧತೆ ನಡೆಸಲಾಗುತ್ತಿದೆ. ಸೆಂಟರ್‌ಗೆ ಸುಲ್ತಾನ್‌ನ ಬ್ರಾಂಚ್ ಮೆನೇಜರ್ ಮುಬೀನ್ ಹೈದರ್ ಪರವನಡ್ಕ ಆಸ್ಪತ್ರೆಯ ಸುಪರಿಂಟೆಂ ಡೆಂಟ್ ಡಾ| ಜಮಾಲ್ ಅಹಮ್ಮದ್‌ರಿಗೆ ಟಿ.ವಿ ಹಸ್ತಾಂತರಿಸಿದರು. ನರ್ಸಿಂಗ್ ಸುಪರಿಂಟೆಂಡೆಂಟ್ ಮಿನಿ, ಮಾಹಿನ್ ಕುನ್ನಿಲ್, ಮಿಥುನ್, ಖಲೀಲ್ ಭಾಗವಹಿಸಿದರು.