ಜನರು ನೋಡುತ್ತಿರುವಂತೆಯೇ ಬಾವಿಗೆ ಹಾರಿದ ಯುವಕ: ಅಗ್ನಿಶಾಮಕದಳದಿಂದ ರಕ್ಷಣೆ

ಕಾಸರಗೋಡು: ಜನರು ನೋ ಡುತ್ತಿರುವಂತೆಯೇ ಯುವಕನೋ ರ್ವ ಬಾವಿಗೆ ಹಾರಿದ್ದು, ಬಳಿಕ ಅಗ್ನಿಶಾಮಕ ದಳ ಆತನನ್ನು ರಕ್ಷಿಸಿದ ಘಟನೆ ನಗರದ ಕರಂದಕ್ಕಾಡಿನಲ್ಲಿ ನಡೆದಿದೆ. ಕರಂದಕ್ಕಾಡ್ ರಾಷ್ಟ್ರೀಯ ಹೆದ್ದಾರಿ ಬಳಿಯ ತಿರುವಿನಲ್ಲಿರುವ ಬಾವಿಗೆ ತಮಿಳುನಾಡಿನ ಕೊಯಂ ಬತ್ತೂರು ನಿವಾಸಿ ಮಾರಿಮುತ್ತು ಪಾಂಡ್ಯನ್ (೩೨) ನಿನ್ನೆ ಸಂಜೆ ಬಾವಿಗೆ ಹಾರಿದ್ದಾನೆ. ವಿಷಯ ತಿಳಿದ ಸ್ಟೇಷನ್ ಆಫೀಸರ್ ಇನ್‌ಚಾರ್ಜ್ ಸಂತೋಷ್ ಕುಮಾರ್ ಮತ್ತು ಇತರ ಸಿಬ್ಬಂದಿಗಳಾದ ಕೆ.ವಿ. ಮನೋ ಹರನ್,  ಶಂಶಾದ್, ಸೂರಜ್, ವಿಜಿನ್, ಷಹಾದ್, ಅನೀಶ್, ರಾಜು ಎಂಬವರು  ತಕ್ಷಣ ಸ್ಥಳಕ್ಕೆ ಆಗಮಿಸಿ ನಡೆಸಿದ ಸಕಾಲಿಕ ಕಾರ್ಯಾಚರಣೆಯಲ್ಲಿ ಬಾವಿ ಯಿಂದ ಆ ಯುವಕನನ್ನು ಮೇಲಕ್ಕೆತ್ತಿ ಜನರಲ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಬಾವಿಗೆ ಹಾರಿದ ಯುವಕ ಅಲ್ಪ ಮಾನಸಿಕ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿ ಎಂದು ಶಂಕಿಸಲಾಗುತ್ತಿದೆ.

You cannot copy contents of this page