ಜನವಾಸ ಕೇಂದ್ರದಲ್ಲಿದ್ದ ಕಾಡುಕೋಣಕ್ಕೆ ಮಾದಕಗುಂಡಿಕ್ಕಿ ಕಾಡಿಗೆ ಬಿಟ್ಟ ಅರಣ್ಯಪಾಲಕರು

ಹೊಸದುರ್ಗ: ಮಡಿಕೈ ಸಮೀಪ ಪತ್ತೆಯಾಗಿದ್ದ ಕಾಡುಕೋಣಕ್ಕೆ ಮಾದಕ ಗುಂಡಿಕ್ಕಿದ ಬಳಿಕ ಅದನ್ನು ಅರಣ್ಯಪಾಲಕರು ಕಾಡಿಗೆ ಬಿಟ್ಟಿದ್ದಾರೆ. ರವಿವಾರ ಮಡಿಕೈ ಕಾರ್ಯಳದಲ್ಲಿನ ಪಾಳು ಬಾವಿಗೆ ಕಾಡುಕೋಣ ಬಿದ್ದಿತ್ತು. ಅದನ್ನು ಮೊನ್ನೆ ಅರಣ್ಯಪಾಲಕರು ಹಾಗೂ ಊರವರು ಸೇರಿ ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಆದರೆ ಕಾಡುಕೋಣ ಕಾಡಿಗೆ ಹೋಗದೆ ಆ ಪರಿಸರದಲ್ಲೇ ಠಿಕಾಣಿ ಹೂಡಿತ್ತು. ಇದರಿಂದಾಗಿ ತೃಶೂರಿನಿಂದ ಅರಣ್ಯ ಇಲಾಖೆಯ ತಜ್ಞರ ತಂಡ ನಿನ್ನೆ ಮಡಿಕೈಗೆ ಆಗಮಿಸಿ ಕಾಡುಕೋಣಕ್ಕೆ ಮಾದಕ ಗುಂಡಿಕ್ಕಿ ಅದನ್ನು ಪ್ರಜ್ಞಾಹೀನಗೊಳಿಸಲಾಯಿತು.  ನಂತರ ಕ್ರೈನ್ ಸಹಾಯದಿಂದ ಅದನ್ನು ಲಾರಿಗೇರಿಸಿ ಕಾಡಿಗೆ ಬಿಡಲಾಗಿದೆ.  ಈ ಕಾಡುಕೋಣ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಹೊಂದಿ ಲ್ಲವೆಂದು ಡಿಎಪ್‌ಒ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page