ಜಯರಾಜನ್ ವಿವಾದ: ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸಭೆ ಸೋಮವಾರ
ತಿರುವನಂತಪುರ: ಎಲ್‌ಡಿಎಫ್ ಸಂಚಾಲಕರೂ, ಸಿಪಿಎಂ ಕೇಂದ್ರ ಸಮಿತಿ ಸದಸ್ಯರೂ ಆಗಿರುವ ಇ.ಪಿ. ಜಯ ರಾಜನ್ ಬಿಜೆಪಿ ಕೇಂದ್ರ ನೇತಾರನಾದ ಪ್ರಕಾಶ್ ಜಾವ್ದೇಕರ್ ರೊಂದಿಗೆ ನಡೆದ ಮಾತುಕತೆ ಪಕ್ಷದೊಳಗೆ ಭಾರೀ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗುವ ಬೆನ್ನಲ್ಲೇ ಸಿಪಿಎಂ ರಾಜ್ಯ ಸೆಕ್ರೆಟರಿ ಸಭೆ ಸೋಮವಾರ ಎಕೆಜಿ ಮಂದಿರದಲ್ಲಿ ನಡೆಯಲಿರುವುದು. ಚುನಾವಣೆ ಅವಲೋಕನ ನಡೆಸಲು ಸಭೆ ನಡೆಯಲಿದೆಯೆಂದು ಹೇಳಲಾಗು ತ್ತಿದೆಯಾದರೂ ಅದರಲ್ಲಿ ಇ.ಪಿ. ಜಯರಾಜನ್ ಬಿಜೆಪಿ ನೇತಾರ ರೊಂದಿಗೆ ನಡೆಸಿದ ಮಾತುಕತೆಯಲ್ಲಿ ಚರ್ಚೆಯಾಗಲಿದೆ ಎನ್ನಲಾಗುತ್ತಿದೆ.
ಇ.ಪಿ. ಜಯರಾಜನ್‌ರನ್ನು ಎಲ್‌ಡಿಎಫ್ ಸಂಚಾಲಕ ಸ್ಥಾನದಿಂದ ತೆರವುಗೊಳಿಸುವ ಬಗ್ಗೆ ಪಕ್ಷ ಅವಲೋಕಿಸುತ್ತಿದೆಯೆಂದೂ ಹೇಳ ಲಾಗುತ್ತಿದೆ. ಇ.ಪಿ. ಜಯರಾಜನ್ ಬಿಜೆಪಿ ನೇತಾರರೊಂ ದಿಗೆ ಮಾತುಕತೆ ನಡೆಸಿರುವುದು ಸಿಪಿಎಂ ಕೇಂದ್ರ ನಾಯಕತ್ವಕ್ಕೆ ಅಸಮಾಧಾನವುಂ ಟುಮಾಡಿದೆ.
ಎಲ್‌ಡಿಎಫ್ ಜೀವನ್ಮರಣ ಹೋರಾಟವಾಗಿ ಕಂಡಿರುವ ಈ ಲೋಕಸಭಾ ಚುನಾವಣೆಯಲ್ಲಿ ಮತದಾನ ದಿನದಂದೇ ಎಲ್‌ಡಿಎಫ್ ಈ ಸಂಚಾಲಕನ ಬಹಿರಂಗ ಹೇಳಿಕೆಯಿಂದ ಸಿಪಿಎಂ ಕಂಗಾ ಲಾಗಿದೆ. ಆದ್ದರಿಂದ ಸೆಕ್ರೆಟರಿಯೇಟ್ ಸಭೆಯಲ್ಲಿ ಇ.ಪಿ. ಜಯರಾಜನ್ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಲಿದೆ ಯೆಂಬ ಸೂಚನೆಯೂ ಇದೆ. ತಿರುವನಂತಪುರ ಆಕುಳದಲ್ಲಿರುವ ತನ್ನ ಮಗನ ಫ್ಲಾಟ್‌ನಲ್ಲಿ ಪ್ರಕಾಶ್ ಜಾವ್ದೇಕರ್‌ರೊಂದಿಗೆ ಮಾತುಕತೆ ನಡೆಸಿರುವುದಾಗಿ ಇ.ಪಿ. ಜಯರಾಜನ್ ತಿಳಿಸಿದ್ದಾರೆ. ವೈಯಕ್ತಿಕ ವಿಷಯಗಳನ್ನು ಮಾತ್ರವೇ ಮಾತನಾಡಿರುವುದಾಗಿ ಜಯg ಜನ್ ತಿಳಿಸಿದ್ದಾರೆ. ಆದರೆ ಸಿಪಿಎಂ ಹಾಗೂ ಬಿಜೆಪಿ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿ ಯುಡಿಎಫ್ ರಂಗಕ್ಕಿಳಿಸಿದಿರುವುದು ಸಿಪಿಎಂನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ನಡೆಯುವ ಸಿಪಿಎಂ ಸೆಕ್ರೆಟರಿಯೇಟ್ ಸಭಗೆ ಹೆಚ್ಚಿನ ಮಹತ್ವ ಕಲ್ಪಿಸಲಾಗಿದೆ.