ಜಲಪಾತ ತೋರಿಸುವುದಾಗಿ ತಿಳಿಸಿ ವಿದ್ಯಾರ್ಥಿಯನ್ನು ಕರೆದೊಯ್ದು ಕಿರುಕುಳ
ಬದಿಯಡ್ಕ: ಶಾಲಾ ವಿದ್ಯಾರ್ಥಿ ಗಳನ್ನು ಕಾರಿನಲ್ಲಿ ಕರೆದೊಯ್ದು ಕಾಡಿ ನಲ್ಲಿ ಕಿರುಕುಳ ನೀಡಿರುವುದಾಗಿ ದೂರ ಲಾಗಿದೆ. ಘಟನೆಗೆ ಸಂಬಂಧಿಸಿ ಇಬ್ಬರ ವಿರುದ್ಧ ಬದಿಯಡ್ಕ ಪೊಲೀಸರು ಪೋಕ್ಸೋ ಕೇಸು ದಾಖಲಿಸಿಕೊಂ ಡಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ 12ರ ಹರೆಯದ ಬಾಲಕನ ದೂರಿನಂತೆ ನೆಕ್ರಾಜೆಯ ರಾಶಿದ್ ಹಾಗೂ ಕಂಡರೆ ಪತ್ತೆ ಹಚ್ಚಬಹುದಾದ ಇನ್ನೋರ್ವನ ವಿರುದ್ಧ ಕೇಸು ದಾಖಲಿಸಲಾಗಿದೆ. ರಾಶಿದ್ ಹಾಗೂ ಸ್ನೇಹಿತ ಸೇರಿ ಮೊದಲು ಇಬ್ಬರು ವಿದ್ಯಾರ್ಥಿಗಳಿಗೆ ಜಲಪಾತ ತೋರಿಸಿಕೊಡುವುದಾಗಿ ತಿಳಿಸಿ ಕಾರಿನಲ್ಲಿ ಕರೆದೊಯ್ದಿದ್ದಾರೆ. ಬಳಿಕ ಓರ್ವ ಬಾಲಕನನ್ನು ಕಾಡಿಗೆ ಕರೆದೊಯ್ದು ಸಲಿಂಗರತಿ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.