ಜಲ ಪ್ರಾಧಿಕಾರದ ಅನಾಸ್ಥೆಯಿಂದ ಎಣ್ಮಕಜೆ ಪಂ.ನಲ್ಲಿ ಶುದ್ಧ ಜಲ ವಿತರಣೆ ಅಸ್ತವ್ಯಸ್ತ
ಪೆರ್ಲ: ಬೇಸಿಗೆಯ ಉಷ್ಣತೆ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡ ಈ ಸಂದರ್ಭದಲ್ಲಿ ಎಣ್ಮ ಕಜೆ ಪಂಚಾಯತ್ ವ್ಯಾಪ್ತಿಯಲ್ಲಿ ಜಲ ಪೂರೈಕೆ ಅಸ್ತವ್ಯಸ್ತಗೊಂಡಿದೆ ಎಂದು ದೂರಲಾಗಿದೆ. ಕುಡಿಯುವ ನೀರು ಪೂರೈಕೆಗೆ ಬೇಕಾದಷ್ಟು ಜಲ ಲಭ್ಯವಿ ದ್ದರೂ ವಿವಿಧ ಪ್ರದೇಶಗಳಲ್ಲಿ ಪೈಪ್ ಹಾನಿಯಾದ ಕಾರಣ ವ್ಯವಸ್ಥಿತವಾಗಿ ನೀರು ಪೂರೈಸರು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಪೈಪ್ ದುರಸ್ಥಿಗಾಗಿ ಇಲಾಖೆಗೆ ಮನವಿ ನೀಡಿದ್ದರೂ ನೌಕರರು ಇಲ್ಲವೆಂಬ ಹಾರಿಕೆಯ ಉತ್ತರ ಅಧಿಕಾರಿಗಳು ನೀಡುತ್ತಿದ್ದಾರೆಂದು ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ತಿಳಿಸಿದ್ದು, ಜಲ ಸಂಪನ್ಮೂಲ ಇಲಾಖೆ ಎಚ್ಚೆತ್ತು ಶುದ್ಧ ಜಲ ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಪ್ರತೀ ಮನೆಗಳಿಗೂ ನಳ್ಳಿ ಅಳವಡಿಸಲಾಗಿದೆ. ವಿತರಣೆಗೆ ಸಾಕಷ್ಟು ನೀರು ಇದ್ದರೂ ಜಲ ಸಂಪನ್ಮೂಲ ಇಲಾಖೆಯ ಬೇಜವಾಬ್ದಾರಿತನದಿಂದ ವಿತರಣೆ ಸಾಧ್ಯವಾಗುತ್ತಿಲ್ಲವೆಂದವರು ತಿಳಿಸಿದ್ದಾರೆ. ನೀರು ತಲುಪದಿದ್ದರೂ ಬಿಲ್ ಕಳುಹಿಸಿ ಜನ ಸಾಮಾನ್ಯರು ಅಲೆ ದಾಡುವಂತಹ ಪರಿಸ್ಥಿತಿ ನಿರ್ಮಿಸಲಾ ಗಿದೆ ಎಂದು ಅವರು ತಿಳಿಸಿದ್ದು, ಸಮರ್ಪಕವಾಗಿ ವಿತರಿಸಿದ ನೀರಿಗೆ ಮಾತ್ರ ಬಿಲ್ ನೀಡಲು ಜಲ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕೆಂದು ಸೋಮಶೇಖರ ಜೆ.ಎಸ್. ಇಲಾಖೆಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜನರನ್ನು ಸೇರಿಸಿ ಹೋರಾಟ ನಡೆಸುವುದಾಗಿ ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.