ಜಾಗತಿಕ ಭಯೋತ್ಪಾದನೆ ವಿರುದ್ಧ ಹೋರಾಡಲು ಹಿಂದೂಗಳು ಸಂಘಟಿತರಾಗಬೇಕು- ಕೆ.ಪಿ. ರಾಧಾಕೃಷ್ಣನ್

ಕಾಸರಗೋಡು: ಜಾಗತಿಕ ಭಯೋತ್ಪಾದನೆಯನ್ನು ತೊಡೆದು ಹಾಕಲು ಹಿಂದೂ ಸಮಾಜ ಒಂದಾಗುವ ಸಮಯ ಬಂದಿದೆ ಎಂದು ಆರ್. ಎಸ್. ಎಸ್ ಉತ್ತರ ದಕ್ಷಿಣ ಪ್ರಾಂತ ಬೌದ್ಧಿಕ್ ಪ್ರಮುಖ್ ಕೆ. ಪಿ. ರಾಧಾಕೃಷ್ಣನ್ ನುಡಿದರು. ಕಾಸರಗೋಡು ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ಪರಿಸರದಲ್ಲಿ ಬಾಂಗ್ಲಾದೇಶ ಮತೀಯ ಅಲ್ಪಸಂಖ್ಯಾತ ಬೆಂಬಲ ಸಮಿತಿಯ ನೇತೃತ್ವದಲ್ಲಿ ಆಯೋಜಿಸಿದ ಪ್ರತಿಭಟನೆ ಯಲ್ಲಿ ಆವರು ಪ್ರಧಾನ ಭಾಷಣ ಮಾಡಿ ದರು. ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳ ನಿಜವಾದ ಶತ್ರು ಭಾರತವಾಗಿದೆ. ಇಸ್ರೇಲ್ ನಂತರ ಭಾರತವೇ ಮುಂದಿನ ಗುರಿ. ಅದರ ಆರಂಭ ಬಾಂಗ್ಲಾದಲ್ಲಿ ಕಂಡು ಬರುತ್ತಿರುವುದು. ಆರ್ಥಿಕವಾಗಿ ಮತ್ತು ಮಿಲಿಟರಿಯಾಗಿ ಬೆಳೆಯುತ್ತಿರುವ ಭಾರತವನ್ನು ನಾಶಮಾಡಲು ಚೀನಾ ಪ್ರಯತ್ನಿಸುತ್ತಿದೆ. ಬಾಂಗ್ಲಾದೇಶವನ್ನು, ಇಸ್ಲಾಂ ಧರ್ಮವನ್ನು ಉಸಿರುಗಟ್ಟಿಸಿ ಕೊಂದ ಕಮ್ಯುನಿಸ್ಟ್ ರಾಷ್ಟ್ರವಾದ ಚೀನಾದ ಭಾಗವಾಗಲು ಜಮಾಯತ್ ಇಸ್ಲಾಮಿ ಮಾತುಕತೆ ನಡೆಸುತ್ತಿದೆ. ಪ್ರಪಂಚದ ಅನೇಕ ಭಾಗಗಳಲ್ಲಿ ಮತೀಯ ಅಲ್ಪ ಸಂಖ್ಯಾತರ ವಿರುದ್ಧ ಆಕ್ರಮಣ ನಡೆಯುತ್ತಿರುವಾಗ ಭಾರತದಲ್ಲಿ ಮಾತ್ರ ಪ್ರತಿಭಟನೆ ಉಂಟಾಗುತ್ತಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಕ್ರೂರ ಹಿಂಸಾಚಾರ ನಡೆದರೂ, ಮುಖ್ಯವಾಹಿ ನಿಗಳಾದ ಮಾಧ್ಯಮಗಳು ಅದನ್ನು ನಿರ್ಲಕ್ಷಿಸುತ್ತಿವೆ. ಮಾಧ್ಯಮಗಳ ಪಕ್ಷಪಾತ ಮತ್ತು ಹಿಂದೂ ವಿರೋಧಿ ಧೋರಣೆಗಳನ್ನು ಖಂಡಿಸಬೇಕು. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ನೈಜ ಘಟನೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜ ನಿಕರಿಗೆ ತಲುಪಿಸಲು ಸಂಘಪರಿ ವಾರದ ಸಂಘಟನೆಗಳು ಪ್ರಯತ್ನಿಸ ಲಿವೆ ಎಂದು ಅವರು ಹೇಳಿದರು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಚಿನ್ಮಯ ಮಿಶನ್ ಕೇರಳ ಘಟಕ ಮೇಧಾವಿ ವಿವಿಕ್ತಾನಂದ ಸರಸ್ವತಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಮಾತಾ ಮೃತಾನಂದಮಯಿ ಮಠದ ಸ್ವಾಮಿ ವೇದ ವೇದಾಮೃತ ಚೈತನ್ಯ. ಆಶೀರ್ವಚನ ನೀಡಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಜಯದೇವ ಖಂಡಿಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಿಂದೂಐಕ್ಯವೇದಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರ್ ಸ್ವಾಗತಿಸಿ, ಸಮಿತಿಯ ಸಂಚಾಲಕ ಸುನಿಲ್ ಕುದೆÀ್ರಪಾಡಿ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page